ಜನನಿ ಶಿಶು ಸುರಕ್ಷಾ ಯೋಜನೆಗೆ ಅನುದಾನದ ಕೊರತೆ…!

25125 ಹೇರಿಗೆಗಳಲ್ಲಿ 24829 ಶಿಸುಗಳ ಜನನ, 296 ಜನನ ಪೂರ್ವದಲ್ಲಿ ಶಿಸುಗಳ ಮರಣ

-ಇವರೆಗೂ ಕೇವಲ ರೂ. 3.25 ಕೋಟಿ ಅನುದಾನ ಬಿಡುಗಡೆ | -ಆರ್‌ಓಪಿ ಪ್ರಕಾರ ಹೆರಿಗೆಗಳ ಅನುಗುಣವಾಗಿ ಅನುದಾನ ಇಲ್ಲ |

ಕೊಪ್ಪಳ : ಪ್ರತಿ ಗರ್ಭಿಣಿ ಸ್ತ್ರೀಗೆ ಅಗತ್ಯವಿರುವ ಪ್ರಸವ ಪೂರ್ವ, ಪ್ರಸವ ವೇಳೆ ಮತ್ತು ಪ್ರಸವ ನಂತರದ ಸೇವೆಗಳು ಹಾಗೂ ನವ ಜಾತ ಶಿಶುವಿಗೆ ಉಚಿತ ಸೇವೆಯನ್ನು ನೀಡಲು ಸರ್ಕಾರ 2011ರಲ್ಲಿ ಜಾರಿಗೆ ತಂದಿರುವ ಜನನಿ ಶಿಶು ಸುರಕ್ಷಾ ಕಾರ್ಯಕ್ರಮಕ್ಕೆ ಅನುಮೋದಿತ ಆರ್.ಓ.ಪಿ. ಪ್ರಕಾರ ಅನುದಾನದ ಕೊರತೆ ಇರುವುದು ಕಂಡುಬರುತ್ತಿದೆ.

ಎಲ್ಲಾ ವರ್ಗದ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಶಿಶುಗಳಿಗೆ (ಎಪಿಎಲ್ ಮತ್ತು ಬಿಪಿಎಲ್) ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿಯೂ ಪ್ರಸವವಾದ ದಿನದಿಂದ ಹಿಡಿದು ಅವರು ಹೆರಿಗೆ ನಂತರ ಆಸ್ಪತ್ರೆಯಿಂದ ಹೊರಬೀಳುವವರೆಗೂ ಸಂಪೂರ್ಣ ಉಚಿತ ಸೇವೆಯ ಹಕ್ಕನ್ನು ಜನನಿ ಸುರಕ್ಷಾ ಯೋಜನೆಯಲ್ಲಿ ಅಡಕವಾಗಿದೆ,

ಇದು ಗರ್ಭಿಣಿ ಸ್ತ್ರೀ ಮತ್ತವರ ಕುಟುಂಬ ಸದಸ್ಯರ ಸ್ವಂತ ಹಣದ ಖರ್ಚನ್ನು ಸಾಕಷ್ಟು ಕಡಿಮೆಗೊಳಿಸುತ್ತದೆ ಮತ್ತು ಸಾಂಸ್ಥಿಕ ಹೆರಿಗೆಗಳನ್ನೂ ಹೆಚ್ಚಿಸುತ್ತದೆ, ಅಂತೆಯೇ ರೋಗಗೊಂಡ ಶಿಶುಗಳಿಗೆ ರಕ್ಷಣೆ ಕೋರಲೂ ದಾರಿ ನೀಡುತ್ತದೆ. ಇದು ತಾಯಿಯ ಹಾಗೂ ಶಿಶುವಿನ ಮತ್ತು ಮರಣಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ,

ಇಂತಹ ಮಹತ್ವದ ಜೆ.ಎಸ್.ಎಸ್.ಕೆ. ಯೋಜನೆಯಡಿ ಅನುಮೋದಿತ ಆರ್.ಓ.ಪಿಯ ಪ್ರಕಾರ ನಿರಿಕ್ಷಿತ ಅನುದಾನವು ಬಿಡುಗಡೆಯಾಗುತ್ತಿಲ್ಲವೆಂಬ ವೈದ್ಯರ ಕೇಳಿಬರುತ್ತಿದ್ದು, ಆದರೂ ಜಿಲ್ಲೆಗೆ 2018-19ನೇ ಸಾಲಿನಲ್ಲಿ ಜೆ.ಎಸ್.ಎಸ್.ಕೆಯಡಿ ರೂ. 160.00 ಲಕ್ಷ ಆರ್.ಓ.ಪಿ. ಅನುಮೋದನೆ ಇರುತ್ತದೆ. ರಾಜ್ಯ ಜೆ.ಎಸ್.ಎಸ್.ಕೆ. ಮಾರ್ಗಸೂಚಿಯನ್ವಯ ಸಾಮಾನ್ಯ ಹೆರಿಗೆಗೆ ರೂ. 1650/- ಮತ್ತು ಸಿಜರಿಯನ್ ಹೆರಿಗೆಗೆ ರೂ. 3800/-ಗಳನ್ನು ಜಿಲ್ಲಾ ಮಟ್ಟದ ಅನುಮೋದಿತ ಆರ್.ಓ.ಪಿ. ಮೀರದಂತೆ ಅನುದಾನ ಬಿಡುಗಡೆಗೊಳಿಸಿದೆ ಎನ್ನಲಾಗಿದೆ.

ಹೆಚ್ಚುವರಿ ಅನುದಾನ ರೂ. 75.71 ಲಕ್ಷ ಜಿಲ್ಲಾಸ್ಪತ್ರೆಗೆ ಹಾಗೂ ರೂ. 46.00 ಲಕ್ಷ ಗಂಗಾವತಿಯ ಸಾರ್ವಜನಿಕ ಆಸ್ಪತ್ರೆಗೆ ಮತ್ತು ಇನ್ನೂಳಿದ ಆರೋಗ್ಯ ಸಂಸ್ಥೆಗಳಿಗೆ ರೂ. 20.00 ಲಕ್ಷ ಸೇರಿ ಒಟ್ಟು ರೂ. 142.00 ಲಕ್ಷ ರೂ.ಗಳ ಅನುದಾನವನ್ನು ಬಳಕೆ ಮಾಡಲು ಹಾಗೂ ಬಿಡುಗಡೆ ಮಾಡಲು ಕೋರಿ 26.02.2018 ರಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ

ಈ ವರ್ಷದಲ್ಲಿ ಎಪ್ರೀಲ್ ದಿಂದ ಜನವರಿ ವರೆಗೆ ಜಿಲ್ಲೆಯಲ್ಲಿ 25125 ಹೇರಿಗೆಗಳ ಪೈಕಿ 24829 ಶಿಸುಗಳ ಜನನವಾಗಿದ್ದು, 296 ಶಿಸುಗಳು ಜನನ ಪೂರ್ವದಲ್ಲಿ ಮರಣವನ್ನು ಹೊಂದಿರುತ್ತವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದ್ದು, 29 ನವಂಬರ್ 2018 ರಂದು ರೂ. 73.38 ಲಕ್ಷ ಜಿಲ್ಲಾಸ್ಪತ್ರೆಗೆ ಹಾಗೂ 60.75 ಲಕ್ಷಗಳನ್ನು ಸಾರ್ವಜನಿಕ ಆಸ್ಪತ್ರೆ ಗಂಗಾವತಿಗೆ ಬಿಡುಗಡೆಗೊಳಿಸಿದ್ದರು ಸಹ ನಿಗದಿ ಆರ್‌ಓಪಿ ಪ್ರಕಾರ ಹೆರಿಗೆಗಳ ಅನುಗುಣವಾಗಿ ಯೋಜನೆಯಿಂದ ಅನುದಾನದ ಕೊರತೆ ಇರುವುದು ಸಾಮಾನ್ಯವಾಗಿದೆ.

2018-19ನೇ ಸಾಲಿಗೆ ಇಲ್ಲಿಯವರೆಗೆ ಒಟ್ಟು ರೂ. 3.22 ಕೋಟಿಯಲ್ಲಿ ಜಿಲ್ಲಾಸ್ಪತ್ರೆಗೆ ರೂ. 1.28 ಕೋಟಿ, ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ರೂ. 98.35 ಲಕ್ಷ ಇತರೆ ಸಂಸ್ಥೆಗಳಿಗೆ (ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು) ರೂ. 95.72 ಲಕ್ಷ ಗಳನ್ನು ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ – ಡಾ.ಆಲ್ಕಾನಂದ ಮಳಗಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು, ಕೊಪ್ಪಳ

– ಮೌಲಾಹುಸೇನ ಬುಲ್ಡಿಯಾರ್

Leave a Reply

Your email address will not be published.