ಹೈಕಮಾಂಡ್ ಸೂಚಿಸಿದರೆ ಲೋಕಸಭೆ ಚುನಾವಣೆಗೆ ಸಿದ್ಧ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್


ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಅಣತಿಯಂತೆ ನಡೆಯುತ್ತೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೆಳಗಾವಿ ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ನಿಲ್ಲಲು ಹೈಕಮಾಂಡ್ ಸೂಚಿಸಿದರೆ ಸ್ಪರ್ಧಿಸುತ್ತೇನೆ ಎಂದರು. 

ಲೋಕಸಭೆ ಚುನಾವಣೆಗೆ ಸಹೋದರ ಪರ ಲಾಭಿ ನಡೆಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್  ನಾನು ಪಕ್ಷದ ಶಿಸ್ತಿನ ಸಿಪಾಯಿ.  ಪಕ್ಷದ ತೀರ್ಮಾನಕ್ಕೆ ಬದ್ಧಳಾಗಿರುತ್ತೇನೆ. ನಾನಾಗಲಿ ನನ್ನ ಸಹೋದರ ಆಗಲಿ ಹೈಕಮಾಂಡ್ ವಿರುದ್ಧವಾಗಿ ನಡೆಯುವುದಿಲ್ಲ ಎಂದರು. 

ಕಳೆದ ಬಾರಿ ನಾನು ಕೆಲಸ ಮಾಡಿ ಪಾರ್ಲಿಮೆಂಟ್ ಟಿಕೆಟ್ ಪಡೆದುಕೊಂಡಿದ್ದೆ.ನಾಲ್ಕು ಲಕ್ಷ ಮತಗಳನ್ನು ಪಡೆದಿದ್ದೆ. ಈ ಬಾರಿ ಎಂಎಲ್ಎ ಆಗಿದ್ದೇನೆ. ಸಾಕಷ್ಟು ಕೆಲಸ ಮಾಡೋದು ಇದೆ ಎಂದರು.

Leave a Reply

Your email address will not be published.