ಮನೋಹರ ಪರಿಕ್ಕರ್ ಇನ್ನಿಲ್ಲ

ಪಣಜಿ: ಕ್ಯಾನ್ಸರ್‌ನಿಂದ ತೀವ್ರವಾಗಿ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ್​ ಪರಿಕ್ಕರ್​ ಅವರು ಭಾನುವಾರ ನಿಧನರಾಗಿದ್ದಾರೆ.

ಮೊದಲ ಐಐಟಿ ವಿಧಾಯಕ‌ ಎಂಬ ಹೆಗ್ಗಳಿಕೆ ಮನೋಹರ ಪರಿಕ್ಕರ ಅವರದು. ರಾಷ್ಟ್ರಪತಿ ಕೋವಿಂದ, ಪ್ರಧಾನಿ ಮೋದಿ, ರಾಹುಲ ಗಾಂಧಿ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪರಿಕ್ಕರ್​ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿರುವುದರಿಂದ ಅವರನ್ನ ಬದುಕಿಸಲು ವೈದ್ಯರು ಶಕ್ತಿಮೀರಿ ತಮ್ಮ ಪ್ರಯತ್ನವನ್ನ ಮುಂದುವರೆಸಿದ್ದರು ಆದರೂ, ಚಿಕಿತ್ಸಾ ವೈಫಲ್ಯದಿಂದ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

Leave a Reply

Your email address will not be published.