ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆ ತಪ್ಪಿಸಿ ಜನರಲ್ಲಿ ಸರಳತೆ ತರುತ್ತವೆ: ವಿಶ್ವನಾಥ ನಾಯಕ

ಸುರಪುರ: ಸಾಮೂಹಿಕ ವಿವಾಹಗಳು ಕುಟುಂಬಗಳ ಆರ್ಥಿಕ ಹೊರೆ ತಪ್ಪಿಸುವುದಲ್ಲದೆ,ಜನರಲ್ಲಿ ಸರಳತೆ ತರಲಿದೆ ಎಂದು ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಶ್ವನಾಥ ನಾಯಕ ಹೇಳಿದರು.

ನಗರದ ಎನ್ ವಿ ಎಂ ಹೋಟೆಲ್ ನಲ್ಲಿ ಜಯ ಕರ್ನಾಟಕ ಸಂಘಟನೆ ಯಾದಗಿರಿ ಜಿಲ್ಲಾ ಘಟಕ ವತಿಯಿಂದ ಸುದ್ಧಿ ಗೋಷ್ಠಿ ನಡೆಸಿ ಮಾತನಾಡಿ,ಯಾದಗಿರಿ ಜಿಲ್ಲಾ ಜಯ ಕರ್ನಾಟಕ ಸಂಘಟನೆ ವತಿಯಿಂದ 2019ರ ಮೇ ತಿಂಗಳ 30ನೇ ತಾರೀಖು 101 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಒಂದು ಒಳ್ಳೆಯ ಕಾರ್ಯಕ್ಕೆ ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು ಮತ್ತು ಬಡವರಿಗೆ ಸಹಾಯ ಆಗುವ ರೀತಿಯಲ್ಲಿ ಯಾರಿಗೆ ಕಡು ಬಡತನ ಇದೆ ಯಾರಿಗೆ ಇದರ ಹೆಚ್ಚಿನ ನೆರವು ಆಗುತ್ತೋ ಅಂಥವರಿಗೆ ಕಾರ್ಯಕರ್ತರು ತಿಳಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳ ಕುರಿತ ಬಿತ್ತಿ ಪಾತ್ರಗಳನ್ನು ಬಿಡುಗಡೆ ಗೊಳಿಸಿದರು.

ಈ ಸಂಧರ್ಭದಲ್ಲಿ ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಹಣಮಂತ ಪೂಜಾರಿ ,ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ಗುತ್ತೆದಾರ್,ಜಿಲ್ಲಾ ಸಂಚಾಲಕ ಮಾರುತಿ ಎಂ ಮುದ್ನಾಳ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಅಜಯ್ ಕುಮಾರ್, ಯಾದಗಿರಿ ತಾಲೂಕ ಅಧ್ಯಕ್ಷ ವಿಜಯಕುಮಾರ್ ,ಸುರಪುರ ತಾಲೂಕ ಅಧ್ಯಕ್ಷ ರವಿನಾಯಕ್,ಶಹಾಪುರ ತಾಲೂಕ ಅಧ್ಯಕ್ಷ ಸೋಪಣ್ಣ ಸೇರಿ ಸಂಘಟನೆಯ ಹಲವಾರು ಪದಾಧಿಕಾರಿಗಳು ,ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published.