ತೀವ್ರ ಬರಗಾಲ ನೀರನ್ನು ಮಿತವಾಗಿ ಬಳಸಿ: ಆರ್. ರಾಜೇಂದ್ರ ಮನವಿ


ಮಧುಗಿರಿ: ಪಟ್ಟಣದಲ್ಲಿ ದಿನೆ ದಿನೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಅದಷ್ಟೂ ದೊರೆಯುತ್ತಿರುವ ನೀರನ್ನು ಮಿತವಾಗಿ ಬಳಸಿ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಆರ್ ರಾಜೇಂದ್ರ ಕರೆ ನೀಡಿದರು.

ಪಟ್ಟಣದ 3 ನೇ ವಾರ್ಡಿನ ಅರಣ್ಯ ಇಲಾಖೆ ಸಮೀಪ ಆಯೋಜಿಸಿದ್ದ ಉಚಿತವಾಗಿ ವಾರ್ಡಿನ ನಾಗರೀಕರಿಗೆ ನೀರಿನ ಕ್ಯಾನ್‍ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ವಾರ್ಡಿನ ಹಾಗೂ ಕಾಂಗ್ರೆಸ್ ಸದಸ್ಯರು ನಾಗರೀಕರಿಗೆ ಹಾಗೂ ಮತದಾರರಿಗೆ ನೀರನ್ನು ಒದಗಿಸಿಕೊಡಲು ಮುಂದಾಗ ಬೇಕು ಮುಂದಿನ ದಿನಗಳಲ್ಲಿ ನೀರಿನ ಅಭಾವ ಮತ್ತೆಷ್ಟೂ ಹೆಚ್ಚಾಗುವ ಸಂಭವವಿದೆ. ಪಕ್ಷದ ಸದಸ್ಯರು ಮುಖಂಡರು ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕು.

ಮುಂದಿನ ದಿನಗಳಲ್ಲಿ ಪಕ್ಷಾತೀತಾವಾಗಿ ಪುರಸಭಾ ಸದಸ್ಯರುಗಳ ಸಹಕಾರದಿಂದ ವಾರ್ಡ್‍ಗಳಲ್ಲಿ ನೀರಿನ ಕ್ಯಾನ್ ಗಳನ್ನು ಉಚಿತವಾಗಿ ವಿತರಿಸುವ ಉದ್ದೇಶ ಹೊಂದಲಾಗಿದೆ 3ನೇ ವಾರ್ಡಿನ ಸದಸ್ಯರಾದ ನಾಸಿಮ ಬಾನು ಮತ್ತು ಅವರ ಪತಿ ಸಾಧಿಕ್ ಇಂತಹ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣೆಗಳಲ್ಲಿ ಸೋಲು ಗೆಲವು ಸಾಮಾನ್ಯ ವಾಗಿದ್ದು ಕೆ.ಎನ್.ರಾಜಣ್ಣ ನವರು ಈ ಹಿಂದೆ ಶಾಸಕರಾಗಿದ್ದಾಗ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿ ಪಡಿಸಿದ್ದಾರೆ ಅದರಂತೆ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರಿಗೆ ಪಕ್ಷಾತೀತಾವಾಗಿ ಅನೂಕೂಲ ಮಾಡಿಕೊಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಎಂ ಎಸ್ ಚಂದ್ರಶೇಖರ್, ಲಾಲಪೇಟೆ ಮಂಜುನಾಥ್, ಮಾಜಿ ಸದಸ್ಯರಾದ ಎಂ.ಎಸ್.ಶಂಕರನಾರಾಯಣ, ಎಂ.ಜಿ.ರಾಮು, ಉಮೇಶ್ ಮುಖಂಡರಾದ ಬಾಬಫಕೃದ್ದೀನ್, ಆಲ್ಲೂಬಾ, ಇಮ್ರಾನ್ ಖಾನ್, ಇಂತಿಯಾಜ್, ಸೀರೂ, ನವಾಜ್, ಯಕ್ಬಾಲ್, ಯೂನಸ್, ಆನಂದ ಕೃಷ್ಣ, ಆನಂದ್ ಕುಮಾರ್ ಲೋಕೇಶ್, ರಘು, ಕೃಷ್ಣಮೂರ್ತಿ ಗಂಗರಾಜು ಮತ್ತಿತರರು ಇದ್ದರು.

Leave a Reply

Your email address will not be published.