ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದಾಗ ಮಾತ್ರ ಯಶಸ್ವಿ ಜೀವನ ಸಾಗಿಸಲು ಸಾಧ್ಯ:ಬಿಇಒ ಮನ್ನಿಕೇರಿ

ಮೂಡಲಗಿ: ಮಕ್ಕಳಿಗೆ ಸಂಸ್ಕಾರ ಕಲಿಸಿದಾಗ ಮಾತ್ರ ಯಶಸ್ವಿ ಜೀವನ ನಡೆಸಲು ಸಾಧ್ಯವಾಗುವದು. ಮಗುವಿಗೆ ಅಕ್ಷರ ಜ್ಞಾನದ ಜೊತೆಗೆ ಸಂಸ್ಕಾರಯುತ ಜೀವನದ ಮೌಲ್ಯಗಳನ್ನು ಕಲಿಸುವದು ಅತ್ಯಾಶ್ಯಕವಾಗಿದೆ ಎಂದು ಮೂಡಲಗಿ ಬಿ.ಇ.ಒ ಅಜೀತ ಮನ್ನಿಕೆರಿ ಹೇಳಿದರು.

ಮೂಡಲಗಿ ಸಮೀಪದ ಅಡಿಬಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾಥಮಿಕ ಶಿಕ್ಷಣವು ಮಗುವಿನ ತಳಪಾಯವಾಗಿದ್ದು, ಬುನಾದಿ ಗಟ್ಟಿಯಾದರೆ ಮಾತ್ರಾ ಮಕ್ಕಳ ಭವ್ಯ ಭವಿಷ್ಯತ್ತನ್ನು ನಿರ್ಮಿಸಲು ಸಾದ್ಯವಾಗುವದು. ಮಗುವನ್ನು ಕೇವಲ ಕಲಿಕೆಗಷ್ಠೆ ಸೀಮಿತವಾಗಿರಸದೆ ಸರ್ವಾಮಗೀಣ ಅಭಿವೃದ್ಧಿಗೆ ಪೂರಕವಾಗುವ ಜೀವನದ ಮೌಲ್ಯಗಳನ್ನು ರೂಡಿಸಬೇಕು ಎಂದು ಹೇಳಿದರು.

ಬಿ.ಆರ್.ಪಿ ಕೆ.ಎಲ್ ಮೀಶಿ, ಸಿ.ಆರ್.ಪಿ ಡಿ.ಎಮ್ ಬೋಳೆತ್ತಿನ, ಪ್ರಧಾನ ಗುರು ವಿ.ಎಮ್ ರಾಜೇಖಾನ, ಸರಕಾರಿ ನೌಕರ ಸಂಘದ ಉಪಾಧ್ಯಕ್ಷ ಎಮ್.ಜಿ ಮಾವಿನಗಿಡದ, ಎಸ್.ಎಸ್ ಪವಾಡಿಗೌಡರ, ಎಸ್.ಬಿ ಚೌದರಿ, ಎಸ್.ಎಚ್ ಹರಿಜನ, ಐ.ಪಿ ಕಡಕೋಳ, ಎಸ್.ಎಮ್ ಕಬ್ಬಲಗಿ, ಕಾಳಮ್ಮ ಇಟ್ನಾಳ ಹಾಗೂ ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published.