ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿಗೆ ಸಚಿವ ಪುಟ್ಟರಾಜು ಚಾಲನೆ


15 ಲಕ್ಷ ರೂ.ವೆಚ್ಚದಲ್ಲಿ 50 ಸಾವಿರ ಲೀಟರ್ ಸಾಮಥ್ರ್ಯದ ಟ್ಯಾಂಕ್ ನಿರ್ಮಾಣ

ಪಾಂಡವಪುರ:  ತಾಲೂಕಿನ  ಜಯಂತಿನಗರ ಗ್ರಾಮದಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಬುಧವಾರ  ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಜಯಂತಿನಗರ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರಯಿದ್ದು, ಟ್ಯಾಂಕ್ ಬೇಕು ಎನ್ನುವುದು ಗ್ರಾಮಸ್ಥರ 5 ವರ್ಷದ ಬೇಡಿಕೆಯಾಗಿತ್ತು.  ಕಾಮಗಾರಿಗೆ 15 ಲಕ್ಷ ರೂ.ನಿಗದಿ ಮಾಡಲಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಮತ್ತು ಗುಣಮಟ್ಟದಿಂದ ನಿರ್ವಹಿಸುವಂತೆ ಅವರು ಗುತ್ತಿಗೆದಾದ ಚಂದ್ರಶೇಖರ ಅವರಿಗೆ ಸೂಚಿಸಿದರು.

ಇದೇ ವೇಳೆ ಗ್ರಾಮದ ಮಹಿಳೆಯರು ತಮಗೆ ಬಟ್ಟೆ ಒಗೆಯಲು ಥಾನಗಟ್ಟೆಗೆ ಹೋಗುವ ದಾರಿಯನ್ನು ವ್ಯಕ್ತಿಯೊಬ್ಬರು ಬಂದ್ ಮಾಡಿದ್ದಾರೆ. ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿದಾಗ ಕೂಡಲೇ ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಕೂಡಲೇ ದಾರಿಯನ್ನು ತೆರವು ಮಾಡಿಸಿ ಮಹಿಳೆಯರಿಗೆ ಥಾನಗಟ್ಟೆಗೆ ಹೋಗಲು ಅನುವು ಮಾಡಿಕೊಡುವಂತೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ವಿಶ್ವನಾಥ, ಮಾಜಿ ಅಧ್ಯಕ್ಷ ರುದ್ರೇಶ, ಗ್ರಾಪಂ ಸದಸ್ಯರಾದ ಪುಷ್ಪ, ಪುಟ್ಟಮ್ಮ, ಮುಖಂಡರಾದ ದೇವಾನಂದ, ಕೆನ್ನಾಳು ರಾಮು, ಸ್ವಾಮೀಗೌಡ, ರಾಜೇಶ, ಮಂಜು, ರಾಜೇಗೌಡ, ಮಹೇಶ, ಲಕ್ಷ್ಮಮ್ಮ, ಪ್ರಭಾವತಿ, ಲೋಕೇಶ, ವೇಣು, ನಂದೀಶ್ ಮುಂತಾದವರು ಇದ್ದರು.

Leave a Reply

Your email address will not be published.