ತುಮಕೂರು ಕ್ಷೇತ್ರ ಉಳಿಸಿಕೊಳ್ಳಲು ದೆಹಲಿಗೆ ದೌಡಾಯಿಸಿದ ಪರಮೇಶ್ವರ್ !

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೇ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿರುವ ಡಿಸಿಎಂ ಜಿ. ಪರಮೇಶ್ವರ ಅದಕ್ಕಾಗಿ ದೆಹಲಿ ಮುಖಂಡರ ಮೊರೆ ಹೋಗಿದ್ದಾರೆ.

ಹಾಲಿ ಸಂಸದ ಮುದ್ದುಹನುಮೇಗೌಡರನ್ನು ಕೈಬಿಟ್ಟು ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ನೀಡಿರುವ ಕುರಿತಂತೆ ತೀವ್ರ ಅಸಮಾಧಾನ ಹೊರಹಾಕಿದ್ದ ಪರಮೇಶ್ವರ, ಕ್ಷೇತ್ರವನ್ನು “ಕೈ ” ಪಕ್ಷಕ್ಕೆ ಉಳಿಸಿಕೊಳ್ಳುವ ಸಲುವಾಗಿ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಗೂ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಆದರೆ, ಕೊನೆ ಗಳಿಗೆವರೆಗೂ ಅವರ ಪ್ರಯತ್ನ ಈಡೇರದ ಕಾರಣ ಪರಮೇಶ್ವರ ಇದೀಗ ದೆಹಲಿಗೆ ದೌಡಾಯಿಸಿದ್ದು, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಹಾಗೂ ರಾಹುಲ್ ಗಾಂಧಿ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.

Leave a Reply

Your email address will not be published.