ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ಪೊಲೀಯೊ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ


ಚಿಕ್ಕೋಡಿ: ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಗೆ ಕಾರಣವಾಗುವ ಪೊಲೀಯೊ ರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ತಾಲೂಕು ಆರೋಗ್ಯ ಅಧಿಕಾರಿ ವಿಠ್ಠಲ ಶಿಂಧೆ ಚಾಲನೆ ನೀಡಿದರು.

ನಗರದ ತಾಲೂಕ ಆಸ್ಪತ್ರೆಯಲ್ಲಿ ಚಾಲನೆ ‌ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದವರೆಗಿನ ಮಕ್ಕಳಿಗೆ ಪೊಲೀಯೊ ಲಸಿಕೆ ನೀಡಲಾಗುತ್ತದೆ. ಅದಕ್ಕಾಗಿ‌ ಎಲ್ಲ ಜನರು ಬಂದು ಸಮೀಪದ ಸರಕಾರಿ‌ ಆಸ್ಪತ್ರೆಯಲ್ಲಿ ಪೊಲೀಯೊ ಲಸಿಕೆ ಹಾಕಿಸಿಕೊಳ್ಳಿ‌ ಎಂದು ಸಲಹೆ ನೀಡಿದರು.

ಚಿಕ್ಕೋಡಿ ತಾಲೂಕಿನಲ್ಲಿ 6,55,000 ಜನಸಂಖ್ಯೆ ಹೊಂದಿದೆ. 66,625 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಪ್ರತಿಯೊಂದು ಹಳ್ಳಿಗಳಲ್ಲಿ ಬೂತ ಹಾಕಲಾಗಿದೆ ಹಾಗೂ ತೋಟದ ವಸತಿಗಳಿಗೆ ಸೋಮವಾರ ಮನೆ ಮನೆಗೆ ತೆರಳಿ ಪೋಲಿಯೊ ಲಸಿಕೆ ಹಾಕಲಾಗುವುದು. 570 ಟೀಮ‌ ಮಾಡಲಾಗಿದೆ. 3 ಟ್ರಾನ್ಸಿಟ್ ಬೂತ್‌ಗಳ ವ್ಯವಸ್ಥೆಯನ್ನು 1) ಚಿಕ್ಕೋಡಿ ಬಸ್ ನಿಲ್ದಾಣ 2) ನಿಪ್ಪಾಣಿ ಬಸ್ ನಿಲ್ದಾಣ 3) ಕಬ್ಬೂರು ರೈಲು ನಿಲ್ದಾಣದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಆರಂಭಕ್ಕೂ ಮೊದಲು ಡೊಳ್ಳು ಬಾರಿಸಿ ಜನಪದ ಗೀತೆ ಮೂಲಕ ಕಲಾವಿದರು ಜಾಗೃತಿ ಮೂಡಿಸಿದರು.

Leave a Reply

Your email address will not be published.