ಕೆ.ರಾಜಶೇಖರ್ ಹಿಟ್ನಾಳಗೆ ಕೈ ಟಿಕೆಟ್..! ಘಟಾನುಘಟಿ ನಾಯಕರಿಗೆ ಬೀಗ್ ಶಾಕ್..!

-ಯುವ ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿಗಾಳಿ..| ಆಸ್ತಿತ್ವದ ಉಳಿವಿಗಾಗಿ ಮಾಜಿ ಸಚಿವ ಬಿಜೆಪಿ ಸೇರ್ಪಡೆಯ ವದಂತಿ |

ಕೊಪ್ಪಳ : ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ನಿರೀಕ್ಷೆಯಂತೆ ಜಿಪಂ ಮಾಜಿ ಅಧ್ಯಕ್ಷ, ಶಾಸಕ ರಾಘೇಂದ್ರ ಹಿಟ್ನಾಳ ಅವರ ಸಹೋದರ ರಾಜಶೇಖರ್ ಹಿಟ್ನಾಳ್‌ಗೆ ಟಿಕೆಟ್ ಬಹುತೇಕ ಖಚಿತವಾದ ಸುದ್ದಿ ಕಾಂಗ್ರೆಸ್ ವಲಯ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಕ್ಷೇತ್ರದಲ್ಲಿ ಸಂಚಲನ ಮೂಡಿದೆ.

ಕಾಂಗ್ರೆಸ್‌ನ ಕೆಲ ಘಟಾನುಘಟಿ ನಾಯಕರು ಬೀಗ್ ಶಾಕ್‌ಗೆ ಒಳಗಾದರೆ, ಯುವ ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿಗಾಳಿ, ಆಸ್ತಿತ್ವದ ಉಳಿವಿಗಾಇ ಮತ್ತು ಪ್ರಚಾರಕ್ಕಾಗಿ ಮಾಜಿ ಸಚಿವರೊಬ್ಬರು ಬಿಜೆಪಿ ಸೇರ್ಪಡೆ ವದಂತಿ ಹಲವು ರಾಜಕೀಯ ಗಿಮೀಕ್‌ಗಳಿಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಹನವಾದ ಚರ್ಚೆ, ಮೆಸೇಜ್‌ಗಳು ಹರಿದಾಡುತ್ತಿವೆ.

ಕಾಂಗ್ರೆಸ್ ಟಿಕೆಟ್‌ಗಾಗಿ ಈ ಹಿಂದೆಂದಿಗಿಂತಲೂ ಇವಾಗ ಪೈಪೋಟಿ ಹೆಚ್ಚು ನಡೆದಿತ್ತು. ಒಂದು ಹಂತದಲ್ಲಿ ಬ್ಯಾಕ್ವರ್ಡ್ ವರ್ಸಸ್ ಫಾರ್ವರ್ಡ್ ಎಂಬಂತಾಗಿ ಇದೀಗ ಕ್ಷೇತ್ರದ ಕಾಂಗ್ರೆಸ್‌ನಲ್ಲೇ ಹಲವು ಬಣಗಳಾಗಿವೆ. ಆ ಮೂಲಕ ಯಾರೇ ಟಿಕೆಟ್ ಪಡೆದು ಕಣಕ್ಕಿಳಿದರೂ ಉಳಿದ ಬಣಗಳು ಯಾ ನಡೆಯನ್ನು ಅನುಸರಿಸುತ್ತಾರೆ ಕಾದುನೋಡಬೇಕಷ್ಟೇ.

ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಬಸವನಗೌಡ ಬಾದಾರ್ಲಿ, ಕೆ. ವಿರೂಪಾಕ್ಷಪ್ಪ, ಶರಣೇಗೌಡ ಬಯ್ಯಪೂರ, ಕೆ. ರಾಜಶೇಖರ್, ಬಸವರಾಜ ರಾಯರಡ್ಡಿ, ಇನ್ನೂ ಹಲವರು ಪ್ರಬಲ ಆಕಾಂಕ್ಷಿಗಳಾಗಿದ್ದರು. ಯುವ ಕಾಂಗ್ರೆಸ್ ಕೋಟಾದಡಿ, ಮೇಲ್ವರ್ಗದಡಿ ಬಾದಾರ್ಲಿ ಬಸವನಗೌಡ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದರು. ಬೀದರ್ ಕ್ಷೇತ್ರಕ್ಕೆ ಹಿಂದುಳಿದ ವರ್ಗದವರಿಗೆ ಕೊಟ್ಟರೆ, ಕೊಪ್ಪಳ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ಎನ್ನಲಾಗಿತ್ತು, ಈಗ ಈಶ್ವರ್ ಖಂಡ್ರೆ ಬೀದರ್ ಗೆ ಅಂತಿಮವಾಗಿದ್ದರಿಂದ ಇಲ್ಲಿ ಹಿಂದುಳಿದ ಸಮುದಾಯದ ರಾಜಶೇಖರ್ ಹಿಟ್ನಾಳಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರದಂತೆ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ.

ಯುವ ಕಾಂಗ್ರೆಸ್ ವ್ಯಾಟ್ಸಪ್ ಗ್ರುಪ್‌ಗಳಲ್ಲಿ ರಾಜಶೇಖರ್‌ಗೆ ಟಿಕೆಟ್ ಫೈನಲ್ ಆದ ಕಾರಣ ನಾವೆಲ್ಲ ಸಾಮೂಹಿಕ ರಾಜಿನಾಮೆ ನೀಡೋಣ. ಕಾಂಗ್ರೆಸ್ ಎನ್ನುವುದು ಹಿಟ್ನಾಳ ಕುಟುಂಬದ ಹಿಡತದಲ್ಲಿದೆ. ನಾವು ದುಡಿದರೆ ಎಲ್ಲಾ ಸ್ಥಾನಮಾನಗಳು ಆ ಕುಟುಂಬಕ್ಕೆ ಮಾತ್ರ ಸಿಕ್ಕಿವೆ. ಶಾಸಕನೂ ಹಿಟ್ನಾಳ ಕುಟುಂಬದವರು, ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸಟ್ಟೆಪ್ಪ ಹಿಟ್ನಾಳ ಇದ್ದರು ಇದೀಗ ಲೋಕಸಭಾ ಟಿಕೆಟ್‌ನ್ನು ಸಹ ರಾಜಶೇಖರ್‌ಗೆ ನೀಡುವ ಮೂಲಕ ಕಾಂಗ್ರೆಸ್ ಮೇಲ್ವರ್ಗದವರ ವಿರೋಧಿಯಾಗಿದೆ. ಹೀಗಾಗಿ ನಮ್ಮ ಪದಾಧಿಕಾರಿ ಸ್ಥಾನಕ್ಕೆ ರಾಜಿನಾಮೆ ನೀಡೋಣ ಎನ್ನುವ ಚರ್ಚೆ, ಮಾತುಕತೆಗಳು ಜೋರಾಗಿಯೆ ನಡೆದಿವೆ. ಇದು ಕಾಂಗ್ರೆಸ್ ವಲಯದಲ್ಲಿ ತಲ್ಲಣಕ್ಕೆ ಕಾರಣವಾಗಿದೆ.

ಜಾತಿ ಲೆಕ್ಕಚಾರ, ಪ್ರಾದೇಶಿಕತೆ, ಪಕ್ಷದ ಗೆಲುವನ್ನು ಗಮನದಲ್ಲಿರಿಸಿಕೊಂಡು ರಾಜಶೇಖರ್ ಹಿಟ್ನಾಳಗೆ ಟಿಕೆಟ್ ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್‌ನ ಕೆಲ ಘಟಾನುಘಟಿ ನಾಯಕರಿಗೆ ಶಾಕ್ ಆಗಿದ್ದು, ಅವರ ಮುಂದೆ ನಡೆ ಬಹಳ ನಿಗೋಡವಾಗಿದೆ. ಒಂದುಕಡೆ ಕಾಂಗ್ರೆಸ್‌ಗೆ ಮುಸ್ಲಿಂ ಮತದಾರರು ಇತ್ತೀಚಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಪದಾಧಿಕಾರಿಗಳ ಚರ್ಚೆಯು ಈ ನಡೆ ಎಲ್ಲಿಗೆ ಹೋಗಿ ತಲುಪಲಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಆಸ್ತಿತ್ವ ಮತ್ತು ಪ್ರಚಾರಕ್ಕಾಗಿ ಮಾಜಿ ಸಚಿವರ ಬಿಜೆಪಿಯತ್ತ.. ? ಸುಳ್ಳುವದಂತಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿರುವ ಜಿಲ್ಲೆಯ ಮಾಜಿ ಸಚಿವರು, ಶಾಸಕರು ಹಾಗೂ ಕೆಲ ಮುಖಂಡರು ತಮ್ಮ ಆಸ್ತಿತ್ವದ ಉಳಿವಿಗಾಗಿ, ಹಾಗೂ ಪಕ್ಷದಿಂದ ನೈಪತ್ಯಕ್ಕೆ ಸರಿಯುವ ಮುಂಚೆ ಈ ಸಂದರ್ಭದಲ್ಲಿ ತಮ್ಮ ಬೆಂಬಲಿಗರ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ರಾಜಕೀಯ ಗಿಮೀಕ್ ನಡೆಸಿರುವರು.

ದೃಶ್ಯ ಮಾದ್ಯಮ ಹಾಗೂ ಪತ್ರಿಕೆಗಳಲ್ಲಿ ಹರಿದಾಡುತ್ತಿರುವ ಸುದ್ದಿಯೊಂದು ಬಹಳ ಸಪ್ಪಳ ಮಾಡಿದೆ, ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಯವರು ಪಕ್ಷದಿಂದ ಬೇಸತ್ತು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಿನ್ನಲೆಯಲ್ಲಿ ಅನೇಕ ಚರ್ಚೆಗಳು ನಡೆದಿದ್ದು, ಇದೊಂದು ರಾಜಕೀಯ ಗಿಮೀಕ್ ಆಗಿದೆ, ಪ್ರಚಾರಕ್ಕಾಗಿಯೇ ಮಾಜಿ ಸಚಿವರು ತಮ್ಮ ಬೆಂಬಲಿಗರ ಮೂಲಕ ಇಂತಹ ವದಂತಿ ಹರಿಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿನ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಶಿವರಾಮೆಗೌಡ, ಶಾಸಕ ಅಮರೇಗೌಡ ಬಯ್ಯಾಪೂರ ಸೇರಿದಂತೆ ಇತರರು ಎಲ್ಲಿಯೂ ಕಾಣಿಸಿಕೊಂಡಿಲ್ಲ, ಇನ್ನೂ ಬಿಜೆಪಿ ಯಿಂದ ಹಾಲಿ ಸಂಸದ ಸಂಗಣ್ಣ ಕರಡಿ ಯವರೇ ಅಭ್ಯರ್ಥಿಯೆಂದು ಹೇಳಲಾಗುತ್ತಿದ್ದರೂ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲದ ಕಾರಣ ಅಲ್ಲಿಯೂ ಸ್ವಲ್ಪ ಮಟ್ಟಿನ ಗೊಂದಲುಂಟಾಗಿದ್ದು, ಟಿಕೆಟ್ ಹಂಚಿಕೆಯು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲಿನ ಬೆಳವಣಿಗೆಗಳು ಚುನಾವಣೆಯ ಮೇಲೆ ಖಂಡಿತ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

-ಮೌಲಾಹುಸೇನ್, ಕೊಪ್ಪಳ

Leave a Reply

Your email address will not be published.