ದೇಶದ ಅಭಿವೃದ್ಧಿಗೆ ಯುಪಿಎಗೆ ಮರಳಿ ಅಧಿಕಾರ ಬೇಕು: ಸತೀಶ ಜಾರಕಿಹೊಳಿ

ದೇಶದ ಅಭಿವೃದ್ಧಿಗೆ ಯುಪಿಎಗೆ ಮರಳಿ ಅಧಿಕಾರ ಬೇಕು: ಸತೀಶ ಜಾರಕಿಹೊಳಿ

ರಾಯಬಾಗ: ದೇಶದ ಯುವಜನತೆ ಎದರಿಸುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆ, ಭಯೋತ್ಪಾದನೆ ನಿರ್ಮೂಲನೆ ಸೇರಿದಂತೆ ಪೂರಕ ಅಭಿವೃದ್ದಿ ಕಾರ್ಯಗಳನ್ನು ಜಾರಿಗೆ ತರಲು ಕೇಂದ್ರದಲ್ಲಿ ಯುಪಿಎ ಸರಕಾರ ಮರಳಿ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ರಾಯಬಾಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಮೋದಿ ಸರಕಾರದ ಸಾಧನೆ ಶೂನ್ಯ ಎಂದು ಟೀಕಿಸಿದರು.

ಕೆಲವು ದಿನಗಳ ಹಿಂದೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಒಂದನ್ನು ಬಿಟ್ಟರೆ ಮೋದಿಗೆ ಬೇರೆ ಏನೂ ಮಾಡಲು ಸಾಧ್ಯವಾಗಿಲ್ಲ. ಅದನ್ನೇ ದೊಡ್ಡದು ಮಾಡಿ ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಹೇಳುವ ಬಿಜೆಪಿ ನಾಯಕರು ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಐದು ವರ್ಷಗಳ ಸಾಧನೆ ಕುರಿತುಂತೆ ಚರ್ಚಿಸಲು ಬೇಕಿದ್ದರೆ ಒಂದ ಸಮಾವೇಶ ಮಾಡೋಣ. ಅಲ್ಲಿಗೆ ತಜ್ಞರನ್ನು ಕರೆಯಿಸಿ ವಿಚಾರ ವಿನಿಮಯ ಮಾಡೋಣ. ಈ ಕುರಿತಂತೆ ಯುವಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಸಂಸದ ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ, ಜಿಲ್ಲಾ ಪಂಚಾಯ್ತಿ, ತಾ.ಪಂ. , ಗ್ರಾಮ ಸದಸ್ಯರು ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.