ಹೈಕಮಾಂಡ್ ಬಳಿ ಲಾಬಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರಗೆ ಹೊಸದೇನಲ್ಲ: ಸತೀಶ ಜಾರಕಿಹೊಳಿ


“ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಆದ್ರೆ ಏನೂ ಮಾಡಲು ಸಾಧ್ಯವಿಲ್ಲ”

ಬೆಳಗಾವಿ: ಕಾಂಗ್ರೆಸ್ ಹೈಕಮಾಂಡ್ ಬಳಿ ಹೋಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಲಾಬಿ ಮಾಡುವುದು ಹೊಸದೆನಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದರು. 

ಇಲ್ಲಿನ್ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ   ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಪರ ಟಿಕೆಟ್ ಲಾಬಿ ವಿಚಾರ ಕುರಿತು ಮಾತನಾಡಿ ಶಾಸಕಿ ಹೆಬ್ಬಾಳ್ಕರ್ ಸಹೋದರನಿಗೆ ಟಿಕೆಟ್ ಕೊಡಸಬಾರದಂತೂ ಎನಿಲ್ಲಾ ಗೆಲ್ಲುವರಿಗೆ‌ ಮಾತ್ರ ನಾವು ಪ್ರಾಮುಖ್ಯತೆ ಕೊಡುತ್ತೇವೆ. 

ಶಾಸಕಿ ಹೆಬ್ಬಾಳ್ಕರ ಸಹೋದರ ಗೆಲ್ಲುತ್ತಾರೆ ಅಂತಾ ಎಲ್ಲರಿಗೆ ಮನವರಿಕೆ ಆದ್ರೆ ಅವರ ಪರವಾಗಿ ಇದ್ದೆ ಇರ್ತೇವೆ ಎಂದರು. 

ಶಾಸಕಿ ಹೆಬ್ಬಾಳ್ಕರ್ ಲಾಬಿ ಮಾಡಿರಬಹುದು, ಇಂದು ಅಂತಿಮವಾಗಿ ಸಭೆಗೆ ಬಂದು ಅವರ ಅಭಿಪ್ರಾಯ ಹೇಳಬೇಕು.ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಆದ್ರೆ ಎನೂ ಮಾಡೊಕೆ ಆಗಲ್ಲ ಎಂದರು. 

ಟಿಕೆಟ್ ಪಟ್ಟಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಕೂಡ ಇದೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರವೇ ಪೈನಲ್ ಎಂದರು.

Leave a Reply

Your email address will not be published.