‘ಕೈ’ ಅಭ್ಯರ್ಥಿ ಆಯ್ಕೆಗೆ ಇಂದು ವರಿಷ್ಠರ ಜೊತೆ ಸಭೆ: ಸತೀಶ ಜಾರಕಿಹೊಳಿ ಹೇಳಿದ್ದು ಏನು?


ಬೆಳಗಾವಿ: ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಇಂದು ಬೆಂಗಳೂರಿನಲ್ಲಿ  ವರಿಷ್ಠರ್ ಜೊತೆ ಸಭೆ ನಡೆಯಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. 

ಇಲ್ಲಿನ್ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ವರಿಷ್ಠರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬೆಳಗಾವಿಯ ಎಲ್ಲ ಮುಖಂಡರು ಸಭೆಗೆ ಹಾಜರಾಗುತ್ತಿದ್ದಾರೆ  ಎಂದು ತಿಳಿಸಿದರು.

ಸಭೆಗೆ ರಮೇಶ್ ಜಾರಕಿಹೊಳಿ ಬರುವಂತೆ ಜಿಲ್ಲಾದ್ಯಕ್ಷ ಸೂಚನೆ ನೀಡಿದ್ದಾರೆ. ಶಾಸಕ ರಮೇಶ  ಕಾಂಗ್ರೆಸ್ ಪಕ್ಷದಲ್ಲೇ ಇರ್ತಾರೆ.
ಅವರಿಗೆ ವರ್ಚಸ್ಸು ಇರುವ ಕ್ಷೇತ್ರದಲ್ಲಿ ಪ್ರಚಾರ ಕೂಡ ಮಾಡುತ್ತಾರೆ ಎಂದರು.

ಲೋಕಸಭೆ ಚುನಾವಣೆಯ ಎಲ್ಲ ಬೆಳವಣಿಗೆ ಕುರಿತು ವರಿಷ್ಠರ ಜೊತೆಗೆ 11.30ಕ್ಕೆ ಸಭೆ ಜರುಗಲಿದೆ ಎಂದು ತಿಳಿಸಿದರು.

 

Leave a Reply

Your email address will not be published.