ಸಿದ್ದರಾಮಯ್ಯ ತಂತ್ರಕ್ಕೆ ಮಂಡಿಯೂರಿದ ಜೆಡಿಎಸ್ ವರಿಷ್ಠರು: ‘ಕೈ’ನಲ್ಲಿ ಸಿದ್ದುನೇ ಬಾಸ್


ಬೆಂಗಳೂರು: ಲೋಕಸಭೆ ಚುನಾವಣೆಗೆ ಕ್ಷೇತ್ರಗಳ ಹಂಚಿಕೆಯಾಗಿದ್ದು ಜೆಡಿಎಸ್ ಗೆ 8 ಕ್ಷೇತ್ರಗಳಲ್ಲಿ ಸೀಮಿತಗೊಳಿಸಿದ ಕಾಂಗ್ರೆಸ್ ನಲ್ಲಿ ಮತ್ತೆ ಸಿದ್ಧರಾಮಯ್ಯ ಬಾಸ್ ಎಂದು ಸಾಬೀತಾಗಿದೆ. 

ಸಿದ್ಧರಾಮಯ್ಯ ತವರು ಜಿಲ್ಲೆಯಾದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಟ್ಟು ಹಿಡಿದಿತ್ತು. ಆದ್ರ ಸಿದ್ದರಾಮಯ್ಯ ತಂತ್ರಗಳ ಮುಂದೆ ಮಂಡಿಯೂರಿರುವ ಜೆಡಿಎಸ್ ವರಿಷ್ಠರು ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದೆ.

28 ಲೋಕಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಬೇಡಿಕೆ ಇಟ್ಟಿದ್ದ ಜೆಡಿಎಸ್ ಗೆ 8 ಕ್ಷೇತ್ರಗಳಿಗೆ ಸೀಮಿತ ಗೊಳಿಸಿವುದರಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಜೆಡಿಎಸ್ ಗೆ ಹೆಚ್ಚಿನ‌ ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಬಿಜೆಪಿಗೆ ಲಾಬವಾಗಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದರು.  

Leave a Reply

Your email address will not be published.