ರಾಜ್ಯ ರಾಜಕಾರಣವೇ ಸಾಕಾಗಿ ಹೋಗಿದೆ ಎಂದ್ರು ಸಿದ್ಧರಾಮಯ್ಯ


ಬೆಂಗಳೂರು: ರಾಜ್ಯ ರಾಜಕಾರಣವೇ ಸಾಕಾಗಿ ಹೋಗಿದೆ, ಇನ್ನೂ ರಾಷ್ಟ್ರರಾಜಕಾರಣಕ್ಕೆ ಎಲ್ಲಿ ಹೋಗಲಿ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. 

ಲೋಕಸಭೆ ಚುನಾವಣೆಗೆ ತಾವು ಸ್ಪರ್ಧಿಸುತ್ತಿರಾ ಎಂದು  ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರು ಕೇಳಿದ  ಪ್ರಶ್ನೆಗೆ ಹೀಗೆ   ಪ್ರತಿಕ್ರಿಯಿಸಿ ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದರು. 

ದೇವೇಗೌಡರು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎಂಬ ಹೇಳಿಕೆ ಕುರಿತು ಮಾತನಾಡಿದ ಸಿದ್ಧರಾಮಯ್ಯ ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ್ ಎಂದು ಹೇಳಿದರು. 

ಮೈಸೂರು ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಜಿಲ್ಲೆಯ ನಾಯಕರ ಜೊತೆ ಸಭೆ ನಡೆಸಿ ಅಂತಿಮಗೊಳಿಸಲಾಗುವುದು ಎಂದರು. 

ಇನ್ನೂ ಕೈ ಬಿಟ್ಟು ಬಿಜೆಪಿ ಸೇರಿದ ಶಾಸಕ ಉಮೆಶ ಜಾಧವ ವಿರುದ್ಧ ಕಾನೂನು ಸಮರ ನಡೆಸುವುದಾಗಿಯೂ ಕೂಡ ಅವರು ಹೇಳಿದರು.

Leave a Reply

Your email address will not be published.