ಸುರಪುರದ ಜಿ.ಎಂ. ಪಾಟೀಲ್‍ಗೆ “ಮಿಸ್ಟರ್ ನಾರ್ತ್ ಕರ್ನಾಟಕ” ಪ್ರಶಸ್ತಿ


ಸುರಪುರ: ಇತ್ತೀಚಿಗೆ ಬೆಂಗಳೂರಿನ ಬನ್ನೇರುಘಟ್ಟ ಪಾರ್ಕ್ ಹೋಟೆಲ್ ನಲ್ಲಿ ನಡೆದ ರಾಜ್ಯ ಮಟ್ಟದ ಮಾಡಲಿಂಗ್ ಸ್ಪರ್ಧೆಯಲ್ಲಿ ಸುರಪುರ ತಾಲೂಕಿನ  ನಾಗರಾಳ ಗ್ರಾಮದ ಗಚ್ಚಪ್ಪಗೌಡ ಮಲ್ಲೇಶಿ ಪಾಟೀಲ ಮಿಸ್ಟರ್ ನಾರ್ತ್ ಕರ್ನಾಟಕ ಪ್ರಶಸ್ತಿ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಜೊತೆಗೆ 40 ಸಾವಿರ  ಮೊಬೈಲ್ ಫೋನ್ ವೋಟಿಂಗ್ ಪಡೆದು ಪಾಪ್ಯುಲರ್ ಫೇಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಗಚ್ಚಪ್ಪಗೌಡ ಧಾರವಾಡದಲ್ಲಿ ಎಂ.ಎಸ್ಸಿ. ಓದುತ್ತಿದ್ದು,  ಓದಿನ ಜೊತೆಗೆ ರಂಗಭೂಮಿ, ಚಿತ್ರರಂಗದಲ್ಲಿ ಸಾಧನೆ ಮಾಡಬೇಕೆನ್ನುವ ಆಸೆ ಹೊಂದಿದ್ದಾರೆ.

Leave a Reply

Your email address will not be published.