ಎಸ್ಎಸ್ಎಲ್ ಸಿ ಗಣಿತ ಪ್ರಶ್ನೆ ಪತ್ರಿಕೆ ಲೀಕ್: ಆರೋಪಿ ಬಂಧನ

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಅಭ್ಯರ್ಥಿಯನ್ನು ಮುಜಾಹಿದ್‌ ಪಾಶಾ ಎಂದು ಗುರುತಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ಮೈಸೂರು ಡಿಡಿಪಿಐ ಪಾಂಡುರಂಗ ದೃಢ ಪಡಿಸಿದ್ದಾರೆ. ಇಂದು ಬೆಳಗ್ಗೆ ಗಣಿತ ಪರೀಕ್ಷೆ ಆರಂಭವಾಗುತ್ತಿದ್ದಂತೆ ಪ್ರಶ್ನೆ ಪತ್ರಿಕೆ ಲೀಕ್ ಆಗಿ ಗೊಂದಲ ಮೂಡಿಸಿತ್ತು.

ಮಹಿಳಾ ಶಿಕ್ಷಕಿ ಮೇಲ್ವಾಚಾರಕಿ ಆಗಿರುವುದನ್ನು ಗಮನಿಸಿದ ಆರೋಪಿ ಒಳವಸ್ತ್ರದೊಳಗೆ ಸ್ಮಾಟ್‌ಫೋನ್‌ ಇಟ್ಟುಕೊಂಡು ಆಗಮಿಸಿದ್ದ ಎನ್ನಲಾಗಿದೆ. ಬಳಿಕ ಪೋಟೋ ತೆಗೆದು ಸ್ನೇಹಿತನ ವಾಟ್ಸಪ್ ಗೆ ರವಾನಿಸಿ ಉತ್ತರ ಕಳುಹಿಸಿಕೊಡುವಂತೆ ಸಂದೇಶ ಕಳುಹಿಸಿದ್ದಾನೆ.

ಆರೋಪಿಯನ್ನು ವಶಕ್ಕೆ ಪಡೆದ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published.