ಮಾ.18ಕ್ಕೆ ನನ್ನ ನಿರ್ಧಾರ ಪ್ರಕಟಿಸುವೆ: ಸುಮಲತಾ ಅಂಬರೀಷ್


ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಮುಗಿದ ಅಧ್ಯಾಯ, ಮಾ. 18 ರಂದು ನನ್ನ ನಿರ್ಧಾರ ಪ್ರಕಟಿಸಲಿದ್ದೇನೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.

ಬಿಜೆಪಿ ನಾಯಕ, ಮಾಜಿ ಸಿಎಂ ಎಸ್.ಎಂ. ಕೃಷ್ಣಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರಾದ ಎಸ್. ಎಂ. ಕೃಷ್ಣಾ ಅವರ ಭೇಟಿ ನೆಮ್ಮದಿ ತಂದಿದೆ. ಮಂಡ್ಯ ಪರಿಸ್ಥಿತಿ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ. ನಾನು ಯಾರ  ಬಗ್ಗೆಯೂ ವ್ಯಕ್ತಿಗತವಾಗಿ ಚರ್ಚೆ ಮಾಡುವುದಿಲ್ಲ ಎಂದರು.

ಇನ್ನು ಜೆಡಿಎಸ್ ನಿಂದ ಸುಮಲತಾಗೆ ಟಿಕೆಟ್ ನೀಡಲಿದ್ದೇವು ಎಂದು ಸಚಿವ ಡಿ.ಸಿ ತಮ್ಮಣ್ಣ ಹೇಳಿಕೆ ಸುಳ್ಳು. ನನಗೆ ಯಾವುದೇ ಆಹ್ವಾನ ಬಂದಿಲ್ಲ.

ಬಿಜೆಪಿ ನಾಯಕ ಎಸ್. ಎಂ. ಕೃಷ್ಣ ಮಾತನಾಡಿ, ಸುಮಲತಾ ಅವರು ತಮ್ಮ ನಿಲುವು ಪ್ರಕಟಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
image courtesy: kp

Leave a Reply

Your email address will not be published.