ಯುಪಿಎಸ್ ಪರೀಕ್ಷೆ ಅರ್ಜಿ ಸಲ್ಲಿಕೆಗೆ ಮಾ. 18 ಕಡೆ ದಿನ


ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಗಳ ಪ್ರಿಲಿಮ್ಸ್‌ ಮತ್ತು ಭಾರತೀಯ ಅರಣ್ಯ ಸೇವೆ ಪ್ರಿಲಿಮ್ಸ್‌ ಪರೀಕ್ಷೆಗಳಿಗೆ ಆನ್‌ಲೈನ್‌ ಅರ್ಜಿಗಳು ಮಾರ್ಚ್‌ 18ಕ್ಕೆ ಸ್ಥಗಿತಗೊಳ್ಳಲಿವೆ. ಯುಪಿಎಸ್‌ಸಿ ಐಎಎಸ್‌, ಐಎಫ್‌ಎಸ್‌ ಆಸಕ್ತ ಅಭ್ಯರ್ಥಿಗಳು ಮಾರ್ಚ್‌ 18 ಸಂಜೆ 6 ಗಂಟೆ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಪ್ರಸ್ತುತ ಯುಪಿಎಸ್‌ಸಿ ಸಿಎಸ್‌ಇ ಪ್ರಿಲಿಮ್ಸ್‌ 2019ರ ಅರ್ಜಿಗಳು hಣಣಠಿs://uಠಿsಛಿ.gov.iಟಿ/ ಮತ್ತು ttps://upsc.gov.in/ ನಲ್ಲಿ ಲಭ್ಯವಿವೆ.

ಅರ್ಜಿ ಶುಲ್ಕ ನಗದು ಮೂಲಕ ಪಾವತಿಸಲು ಮಾರ್ಚ್‌ 17 ಕೊನೆಯ ದಿನಾಂಕವಾಗಿದೆ. ಮಾ.17 ಭಾನುವಾರು ಮಧ್ಯಾಹ್ನ 11.59 ನಿಮಿಷಕ್ಕೆ ಕೌಂಟರ್‌ ಕ್ಲೋಸ್‌ ಆಗಲಿದೆ. ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಲು ಮಾರ್ಚ್‌ 18ರ ಸಂಜೆ 6 ಗಂಟೆಯ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷೆ ಜೂನ್‌ 2, 2019ಕ್ಕೆ ನಡೆಯಲಿದೆ. ಪ್ರವೇಶ ಪತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, hಣಣಠಿs://uಠಿsಛಿ.gov.iಟಿ/ ನಲ್ಲಿ ಅಪ್‌ಡೇಟ್‌ ಆಗಲಿದೆ.

ಅಭ್ಯರ್ಥಿಗಳು ಒಟ್ಟು 6 ಬಾರಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಎದುರಿಸಬಹುದು. ಯುಪಿಎಸ್ಇ ಸಿಎಸ್‌ಇ 2019ಗೆ ವಯೋಮಿತಿ 21ರಿಂದ 32 ವರ್ಷಗಳು. ವಯೋಮಿತಿ ಪರಿಗಣನೆಗೆ ಆಗಸ್ಟ್‌ 1, 2019 ಮಾನದಂಡವಾಗಿದೆ. ಕನಿಷ್ಠ ವಿದ್ಯಾರ್ಹತೆ ಪದವಿ ಪಡೆದಿರಬೇಕು. ಭಾರತೀಯ ಅಭ್ಯರ್ಥಿಗೆ ಮಾತ್ರ ಈ ಪರೀಕ್ಷೆ ಬರೆಯಲು ಅವಕಾಶವಿದೆ.

Leave a Reply

Your email address will not be published.