ಪಿಯುಸಿ ಫಲಿತಾಂಶ: ಕೊಪ್ಪಳ 20ನೇ ಸ್ಥಾನಕ್ಕೆ

9628 ವಿದ್ಯಾರ್ಥಿಗಳ ಪೈಕಿ 6080 ಉತ್ತೀರ್ಣ ಶೇ. 63.15 ರಷ್ಟು ಫಲಿತಾಂಶ

ಕೊಪ್ಪಳ: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕೊಪ್ಪಳ ಜಿಲ್ಲೆಯು ಕಳೆದ ಬಾರಿಗಿಂತ ಸ್ವಲ್ಪ ಸುಧಾರಣೆಕಂಡಿದ್ದು, ಕಳೆದ ವರ್ಷ 26 ಸ್ಥಾನಕ್ಕಿದ್ದ ಜಿಲ್ಲೆಯು ಈ ವರ್ಷ 20ನೇ ಸ್ಥಾನಕ್ಕೆ ಬಂದಿದ್ದು, ಪರೀಕ್ಷೆಗೆ ಹಾಜರಾದ 9628 ಒಟ್ಟು ವಿದ್ಯಾರ್ಥಿಗಳಲ್ಲಿ 6080 ವಿದ್ಯಾಥಿಗಳು ಪಾಸಾಗಿದ್ದು, ಶೇ. 63.15 ರಷ್ಟು ಫಲಿತಾಂಶ ಬಂದಿದೆ.

ಕಳೆದ ಬಾರಿ ಶೇ.63.04 ರಷ್ಟು ಫಲಿತಾಂಶ ಮೂಲಕ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ 26 ನೇ ಸ್ಥಾನದಲ್ಲಿತ್ತು. ಆದರೆ, ಈ ವರ್ಷ ಶೇ.63.15 ರಷ್ಟು ಫಲಿತಾಂಶ ಮೂಲಕ 20 ನೇ ಸ್ಥಾನಕ್ಕೆ ಇಳಿಕೆ ಕಂಡಿದೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 9628 ಒಟ್ಟು ವಿದ್ಯಾರ್ಥಿಗಳಲ್ಲಿ 6080 ವಿದ್ಯಾಥಿಗಳು ಪಾಸಾಗಿದ್ದಾರೆ. ಇದರಲ್ಲಿ ಗ್ರಾಮೀಣ ವಿಭಾಗದ 1934 ವಿದ್ಯಾರ್ಥಿಗಳು, ನಗರ ಹಾಗೂ ಪಟ್ಟಣದ 4146 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವರು.

ಕಲಾ ವಿಭಾಗದಲ್ಲಿ 4793 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 2727 ವಿದ್ಯಾರ್ಥಿಗಳು ಪಾಸಾದರೆ, ವಾಣಿಜ್ಯ ವಿಭಾಗದಲ್ಲಿ 2736 ಪರೀಕ್ಷೆಗೆ ಹಾಜರಾಗಿದ್ದವರ ಪೈಕಿ 1935 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2099 ಪರೀಕ್ಷೆ ಹಾಜರಾದವರ ಪೈಕಿ 1418 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವರು. ಇದರಿಂದ ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯು 2 ನೇ ಸ್ಥಾನದಲ್ಲಿದೆ. ಶೇ 64.87 ರಷ್ಟು ಫಲಿತಾಂಶ ಪಡೆಯುವ ಮೂಲಕ ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. 53.02 ಫಲಿತಾಂಶದೊಂದಿಗೆ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿರುವುದು ಕಂಡು ಬರುತ್ತಿದೆ.

ಕೋಟ್ : ಜಿಲ್ಲೆಯ ಎಲ್ಲಾ ಕಾಲೇಜುಗಳ ಫಲಿತಾಂಶದ ಮಾಹಿತಿ ನಾಳೆಯ ವೇಳೆಗೆ ಸಂಪೂರ್ಣವಾಗಿ ಲಭ್ಯವಾಗಲಿದ್ದು, ಈಗಾಗಲೆ ಪಿಯುಸಿ ಬೋರ್ಡನಿಂದ ಫಲಿತಾಂಶದ ಪಟ್ಟಿಯನ್ನು ಪಡೆದುಕೊಂಡಿದ್ದು, ಎಲ್ಲವನ್ನು ಕ್ರೋಡಿಕರಿಸಿದ ನಂತರ ವಿದ್ಯಾರ್ಥಿಗಳು ಪಡೆದ ಅಂಕಗಳು, ರ್‍ಯಾಂಕಿಗ್ ಸೇರಿ ಇತರೆ ಮಾಹಿತಿ ಸಿಗಲಿದೆ.

ಎಲ್.ಜಿ.ರಾಟಿಮನಿ, ಡಿಡಿಪಿಯು, ಕೊಪ್ಪಳ

Leave a Reply

Your email address will not be published.