ಲೋಕಸಮರಕ್ಕೂ ಮುನ್ನ ಬಿಜೆಪಿಗೆ ಭಾರಿ ಶಾಕ್: 3500 ಕ್ಕೂ ಹೆಚ್ಚು ಜನ ಕಾಂಗ್ರೆಸ್ ಸೇರ್ಪಡೆ

ಅಗರ್ತಲಾ: ಬಿಜೆಪಿ ಮತ್ತು ಇತರೆ ಪಕ್ಷಗಳ ಮಾಜಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಸೇರಿದಂತೆ ಒಟ್ಟು 3500 ಕ್ಕೂ ಹೆಚ್ಚು ಜನ ಕಾಂಗ್ರೆಸ್ ಸೇರುವ ಮೂಲಕ ತ್ರಿಪುರಾದಲ್ಲಿ ಲೋಕಸಮರಕ್ಕೂ ಮುನ್ನ ಆಡಳಿತಾರೂಢ ಬಿಜೆಪಿ ಮತ್ತು ಐಪಿಎಫ್ ಟಿ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.

ತ್ರಿಪುರಾ ಕಾಂಗ್ರೆಸ್ ಅಧ್ಯಕ್ಷ ಪ್ರದ್ಯೋತ ಕಿಶೋರ್ ದೇಬ್ ಬರ್ಮನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಜಿ ಶಾಸಕ ಅಶೋಕ ಕುಮಾರ ಬೈಧ್ಯ್ ಸೇರಿ 3500 ಕ್ಕೂ ಹೆಚ್ಚು ಜನ ಬಿಜೆಪಿ, ಐಪಿ ಎಫ್ ಟಿ ಮತ್ತು ಸಿಪಿಐ ಪಕ್ಷಗಳ ಬಿಟ್ಟು ಒಂದೇ ಸಮಯದಲ್ಲಿ ಕಾಂಗ್ರೆಸ್ ಸೇರಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಗೆ ಈ ಘಟನೆ ಸಾಕ್ಷಿಯಾಗಿದ್ದು ಬಿಜೆಪಿ ಮತ್ತು ಐಪಿಎಫ್ ಟಿ ಮತ್ರಿ ಸರ್ಕಾರ ವಿರುದ್ಧ ಜನ ಬೇಸತ್ತು ಹೋಗಿದ್ದಾರೆ ಎಂದರು.

ಎಪ್ರಿಲ್ 11 ರಂದು ತ್ರಿಪುರಾ ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿದಿದ್ದು ಎಪ್ರಿಲ್ 18 ರಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ.

Leave a Reply

Your email address will not be published.