ನಾಲ್ಕು ಸುಮಲತಾಗಳು ಕಣದಲ್ಲಿ: ಮಂಡ್ಯ ಜನರು ದಡ್ಡರಲ್ಲ ಎಂದು ಸಿಎಂಗೆ ಟಾಂಗ್ ಕೊಟ್ಟ ನಟ ಯಶ್

ಮಂಡ್ಯ: ಇಲ್ಲಿನ ಜನರನ್ನು ದಡ್ಡರೆಂದು ನಿರೂಪಿಸಲು ನಾಲ್ಕು ಸುಮಲತಾರನ್ನು ಚುನಾವಣಾ ಅಖಾಡಕ್ಕೆ ಇಳಿಸಿದ್ದಾರೆ ಎಂದು ಸಿಎಂ ಕುಮಾರಸ್ವಾಮಿರನ್ನು
ಪರೋಕ್ಷವಾಗಿ ನಟ ಯಶ್ ಟಾಂಗ್ ಕೊಟ್ಟಿದ್ದಾರೆ.

ಇಂದು ಮಳವಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ ನಾಲ್ಕು ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ಚುನಾವನಾ ಅಖಾಡಕ್ಕೆ ಇಳಿಸಿದ್ದಾರೆ. ನಮ್ಮನ್ನು ದಡ್ಡರನ್ನಾಗಿ ಮಾಡಲು ಹೊರಟಿದ್ದಾರೆ. ಆದ್ರೆ ಮಂಡ್ಯದ ಜನರು ದಡ್ಡರಲ್ಲ ಎಂದು ಸಾಬೀತು ಪಡಿಸಬೇಕು ಎಂದರು.

ಮಂದ್ಯ ನೆಲೆಯಿಂದ ಸಾಕಷ್ಟು ನಾಯಕರು ಹೊರಬಂದಿದ್ದಾರೆ. ಸುಮಲತಾ ಅವರು ಒಳ್ಳೆಯ ನಾಯಕರಾಗುತ್ತಾರೆ ಎಂದು ಯಶ ವಿಶ್ವಾಸ್ ವ್ಯಕ್ತ ಪಡಿಸಿದರು.

Leave a Reply

Your email address will not be published.