ಮಾನವ ಬಂಧುತ್ವ ವೇದಿಕೆಯಿಂದ ಅರಟಾಳದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ 128ನೇಜಯಂತಿ ಆಚರಣೆ

ಅಥಣಿ: ಅರಟಾಳ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ 128ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಗ್ರಾಪಂ ಕಾರ್ಯದರ್ಶಿ ಗಡಾದೆ, ಗ್ರಾಪಂ ಕ್ಲರ್ಕ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು.

ಮಾನವ ಹಕ್ಕುಗಳ ಹೋರಾಟಗಾರರಾದ ಡಾ.ಗೌತಮ ಬನಸೋಡೆ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ ರವರ ಕೊಡುಗೆ ಅಪಾರ. ಜನರು ಮೂಢನಂಬಿಕೆಯಿಂದ ಹೊರಬಂದು ವೈಚಾರಿಕತೆಯಡೆ ಸಾಗಬೇಕು ಎಂದು ಹೇಳಿದರು.

ಆನಂದ , ಹಣಮಂತ ಪಾಟೀಲ, ಯಶೋಧರ ಕಾಂಬಳೆ, ಸಾಗರ ಕಾಂಬಳೆ, ಮಲ್ಲಿಕಾರ್ಜುನ ಕಾಂಬಳೆ, ಕಲ್ಲಪ್ಪ ಕಾಂಬಳೆ, ದಶರಥ ಕಾಂಬಳೆ, ದುರ್ಗಪ್ಪ ಕಾಂಬಳೆ, ಮಾಳಪ್ಪ ಕಾಂಬಳೆ, ಸುರೇಶ ಕಾಂಬಳೆ ಇತರರು ಇದ್ದರು. ಚನ್ನಬಸು ಬಿರಾದಾರ ನಿರೂಪಿಸಿದರು.

Leave a Reply

Your email address will not be published.