ಮನ್ನಿಕೇರಿ ಮಹಾಂತೇಶ್ವರನ ಮಹಿಮೆ ಅಪಾರ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಕೋಮು ಸಾಮರಸ್ಯಕ್ಕೆ ನಮ್ಮ ದೇಶವೇ ಜಗತ್ತಿಗೆ ಮಾದರಿಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳೀದರು.

ಸೋಮವಾರ ಸಂಜೆ ತಾಲೂಕಿನ ಮನ್ನಿಕೇರಿ ಗ್ರಾಮದ ಮಹಾಂತೇಶ್ವರ ದೇವಸ್ಥಾನದ ದರ್ಶನ ಪಡೆದು ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿ ಭಾರತ ಜಾತ್ಯಾತೀತ ದೇಶ. ಎಲ್ಲ ಜಾತಿ ಜನಾಂಗದವರು ಪರಸ್ಪರ ಅಣ್ಣ-ತಮ್ಮಂದಿರರಂತೆ ಜೀವನ ಸಾಗಿಸುತ್ತಿದ್ದಾರೆ. ಎಲ್ಲ ಧರ್ಮಿಯರು ಕೂಡ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಿದ್ದಾರೆ. ಈ ಮೂಲಕ ಪ್ರಪಂಚಕ್ಕೆ ನಮ್ಮದು ಸೌಹಾರ್ದಯುತ ರಾಷ್ಟ್ರವೆಂದು ಸಾರುತ್ತಿದ್ದಾರೆ ಎಂದರು.

ಮಹಾಂತೇಶ್ವರ ಎಲ್ಲ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಅದ್ಭುತ ದೇವಸ್ಥಾನವಾಗಿದೆ. ಮನ್ನಿಕೇರಿ ಮಹಾಂತೇಶ್ವರ ದೇವಸ್ಥಾನದ ಇತಿಹಾಸವಿದೆ ಎಂದು ಬಣ್ಣಿಸಿದರು.

ಮಹಾಂತ ಸಿದ್ಧೇಶ್ವರ ಸ್ವಾಮೀಜಿಯವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದರು.

ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ರವಿ ಪರುಶೆಟ್ಟಿ, ಮನ್ನಿಕೇರಿ ಗ್ರಾಪಂ ಮಾಜಿ ಅಧ್ಯಕ್ಷರಾದ ಮುದಕಪ್ಪ ಗೋಡಿ, ಬಾಳಪ್ಪ ಗೌಡರ, ಮುಖಂಡರಾದ ಬಸು ನಾಯ್ಕರ, ಲಕ್ಷ್ಮಣ ಗಡಾದ, ಪುಂಡಲೀಕ ದಳವಾಯಿ, ಸತ್ತೆಪ್ಪ ಗಡಾದ, ರಾಮಣ್ಣಾ ನಾಡಗೌಡರ, ಮಹಾಂತಯ್ಯಾ ಹಿರೇಮಠ, ಮಹಾಂತೇಶ ಮೆಟ್ಟಿನ, ಸುಭಾಸ ಪೂಜೇರಿ, ಮಾರುತಿ ಮುರಗಜ್ಜಗೋಳ, ಮಾರುತಿ ಪೂಜೇರಿ, ಬಾಬು ವನಶೆನವಿ, ಸದಾಶಿವ ಒಳಗಿನವರ, ಮಹಾಂತೇಶ ಮ್ಯಾಗೇರಿ, ಶಂಕರ ಗಡಾದ, ಶಂಕರ ತವಗಿ, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.