ವಿಡಿಯೋ: ಜಾರಕಿಹೊಳಿ ಸಹೋದರರ ನಡುವೆ ಸಂಧಾನಕ್ಕೆ ಮುಂದಾದ ಬಾಲಚಂದ್ರ ಜಾರಕಿಹೊಳಿ…!

ಗೋಕಾಕ: ರಾಜ್ಯ ರಾಜಕೀಯದಲ್ಲಿ ಧೂಳೆಬ್ಬಿಸಿರುವ ಜಾರಕಿಹೊಳಿ ಸಹೋದರರ ನಡುವಿನ ಭಿನ್ನಮತ ಶಮನಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಂದಾಗಿದ್ದಾರೆ.

ಸಹೋದರರಾದ ರಮೇಶ ಜಾರಕಿಹೊಳಿ ಮತ್ತು ಸತೀಶ ಜಾರಕಿಹೊಳಿ ಇಬ್ಬರೊಂದಿಗೂ ತಾವು ಮಾತನಾಡಿದ್ದು, ಕುಟುಂಬದ ವಿಚಾರವನ್ನು ಮಾಧ್ಯಮಗಳೆದುರು ಒಯ್ಯಬೇಡಿ ಎಂದು ಮನವಿ ಮಾಡಿದ್ದೇನೆ ಎಂದು ಬಾಲಚಂದ್ರ ಗೋಕಾಕನಲ್ಲಿ ತಿಳಿಸಿದರು.

ರಾಜಕೀಯವಾಗಿ ಏನೇ ಆಗಬಹುದು. ಮೇ 23 ರ ವರೆಗೆ ಕಾಯಿರಿ ಎಂದಿದ್ದಾರೆ ಎಂದರು.

Leave a Reply

Your email address will not be published.