ಎಲ್ಲರು ಕಡ್ಡಾಯ ಮತದಾನ ಮಾಡಿ: ಮಹಾಮನಿ


ಸುರಪುರ: ನಮ್ಮ ದೇಶದ ಬಹುದೊಡ್ಡ ಹಬ್ಬ ಎಂದರೆ ಅದು ಮತದಾನವಾಗಿದೆ,ಇದರಲ್ಲಿ ಪ್ರತಿಯೊಬ್ಬ ಮತದಾರ ಭಾಗವಹಿಸಿ ಮತ ಚಲಾವಣೆ ಮಾಡುವ ಮೂಲಕ ಶಕ್ತಿಯುತ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮನವಿ ಮಾಡಿದರು.

ಯಾದಗಿರಿ ಜಿಲ್ಲಾ ಸ್ವೀಪ ಸಮಿತಿ ಮತ್ತು ಜಿಲ್ಲಾ ಪಂಚಾಯತಿ ಸಹಭಾಗಿತ್ವದಲ್ಲಿ ನಗರದ ರಂಗಂಪೇಟೆಯಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮತದಾನ ಜಾಗೃತಿ ಪ್ರತಿನಿಧಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕವಿತಾ ಮನ್ನಿಕೇರಿ ಮಾತನಾಡಿ, ಮತದಾನ ಎಂಬುದು ಪ್ರತಿಯೊಬ್ಬರ ಹಕ್ಕಾಗಿದೆ,ಅದನ್ನು ಚಲಾಯಿಸುವ ಮೂಲಕ ಎಲ್ಲರು ನಿಮ್ಮ ಇಷ್ಟದ ಸರಕಾರ ರಚನೆಯಲ್ಲಿ ಪಾತ್ರವಹಿಸಬೇಕಿದೆ. 18 ವರ್ಷ ತುಂಬಿದ ಎಲ್ಲರು ತಪ್ಪದೆ ಮತಗಟ್ಟೆಗೆ ಬಂದು ಮತ ಚಲಾಯಿಸಿ.ಅಲ್ಲದೆ ಪ್ರತಿಯೊಬ್ಬ ಮತದಾರರು ನಿಮ್ಮ ಹೆಸರುಗಳು ಮತದಾರ ಪಟ್ಟಿಯಲ್ಲಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ ಸುರೇಶ ಅಂಕಲಗಿ, ನಗರಸಭೆ ಆಯುಕ್ತ ಏಜಾಜ್ ಹುಸೇನ್,ಸ್ವೀಪ್ ಅಧಿಕಾರಿ ಖಾದರ್ ಪಟೇಲ್,ನಗರಸಭೆ ಜೆಇ ಸುನೀಲ್ ನಾಯಕ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published.