ಸ್ಟ್ರಾಂಗ ರೂಂ ಗೆ ತನ್ನದೂ ಒಂದು ಬೀಗ ಹಾಕಿ ಎಂದ ಬಿಜೆಪಿ ಅಭ್ಯರ್ಥಿ ಯಾರು ಗೊತ್ತಾ…?!

ಹೈದರಾಬಾದ್​: ಚುನಾವಣೆಯಲ್ಲಿ ಇವಿಎಂ ಬಳಕೆ ಬಗ್ಗೆ ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಹಲವಾರು ಆರೋಪಗಳನ್ನು ಮಾಡುತ್ತಿರುವುದು ಈಗ ಹಳೆಯ ಸುದ್ದಿ . ಆದರೆ, ತೆಲಂಗಾಣ ನಿಜಾಮಾಬಾದ್​ನ ಬಿಜೆಪಿ ಅಭ್ಯರ್ಥಿಯೊಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ತಾನೊಂದು ಬೀಗ ಕೊಡುತ್ತೇನೆ. ಅದನ್ನು ಸ್ಟ್ರಾಂಗ್​ ರೂಂಗೆ ಹಾಕಲು ಅವಕಾಶ ನೀಡಿ ಎಂದು ಕೇಳಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಚುನಾವಣೆ ನಡೆಯುವತನಕ ಒಂದೊಂದು ಪಕ್ಷ ಒಂದೊಂದು ತರಹದ ಆರೋಪ ಪ್ರತ್ಯಾರೋಪ ಮಾಡುವುದು ಸಹಜ. ಚುನಾವಣೆ ಮುಗಿದ ಬಳಿಕ ಇವಿಎಂ ಸರಿಯಿಲ್ಲ, ಇವಿಎಂ, ವಿವಿಪ್ಯಾಟ್​ಗಳಿಗೆ ಭದ್ರತೆ ಸಾಕಾಗುತ್ತಿಲ್ಲ ಎಂಬಂತಹ ಆರೋಪ ಕೇಳಿಬರುತ್ತವೆ.

ಇದೀಗ ಮೊದಲ ಹಂತದಲ್ಲಿಯೇ ನಿಜಾಮಾಬಾದ್​ನಲ್ಲಿ ಕೂಡ ಮತದಾನವಾಗಿದೆ. ಈಗ ಅಲ್ಲಿನ ಇವಿಎಂ, ವಿವಿಪ್ಯಾಟ್​ಗಳೆಲ್ಲ ಸ್ಟ್ರಾಂಗ್​ ರೂಂ ಸೇರಿದ್ದು ಬಿಜೆಪಿ ಅಭ್ಯರ್ಥಿ ಅರವಿಂದ್​ ಧರ್ಮಪುರಿ ತಾವೂ ಕೂಡ ರೂಂ ಗೆ ಬೀಗಹಾಕಲು ಅವಕಾಶ ಮಾಡಿಕೊಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published.