ಎಸಿಬಿ ಡಿವೈಎಸ್ಪಿ ಬಾಲರಾಜ್ ಹೆಸರಲ್ಲಿ ರಾಜಕೀಯ ಮುಖಂಡರನ್ನು ವಂಚಿಸಿದ್ದ ಆರೋಪಿ ಬಂಧನ!

ಬೆಂಗಳೂರು: ಎಸಿಬಿ ಡಿವೈಎಸ್ ಪಿ ಬಾಲರಾಜ್ ಹೆಸರಿನಲ್ಲಿ ಸಚಿವರಿಗೆ ಬ್ಲಾಕ್ ಮೇಲ್ ಮಾಡಿ ಹಣ ಎಗರಿಸುತ್ತಿದ್ದ ಖತರ್ನಾಕ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮುರುಗಪ್ಪ ನಿಂಗಪ್ಪ ಕುಂಬಾರ್ ಎಂದು ಗುರುತಿಸಲಾಗಿದೆ. 1986 ರಲ್ಲಿ ಬೆಳಗಾವಿಯ ಸವದತ್ತಿಯಲ್ಲಿ ಸಿವಿಲ್ ಪೊಲೀಸ್ ಪೇದೆಯಾಗಿ ಕೆಲಸಕ್ಕೆ ಸೇರಿದ್ದ. 1996ರಲ್ಲಿ ಕೆಲಸದಿಂದ ವಜಾ ಮಾಡಲಾಗಿತ್ತು. ಭ್ರಷ್ಟಾಚಾರ ಆರೋಪದ ಮೇಲೆ ವಜಾ ಆಗಿದ್ದ ಎಂದು ತಿಳಿದು ಬಂದಿದೆ.

ಕೆಲಸದಿಂದ ವಜಾ ಆದ ಬಳಿಕ ಇದೇ ವೃತ್ತಿ ಮುಂದುವರೆಸಿಕೊಂಡಿ. ಸಚಿವರು, ರಾಜಕೀಯ ಮುಖಂಡರು, ಗುತ್ತಿಗೆದಾರರು, ಇಂಜಿನಿಯರ್ಸ್ ಗಳಿಗೆ ಕರೆ ಮಾಡಿ ತಾನು ಎಸಿಬಿ ಡಿವೈಎಸ್ ಪಿ ಬಾಲರಾಜ್ ಎಂದು ಪರಿಚಯಿಸಿಕೊಂಡು ಹಣದ ಬೇಡಿಕೆ ಇಡುತ್ತಿದ್ದ. ಹಣ ನೀಡದಿದ್ದಲ್ಲಿ ರೇಡ್ ಮಾಡ್ತಿನಿ ಎಂದು ಬೆದರಿಕೆ ಹಾಕುತ್ತಿದ್ದ. ಬಿ ರಿಪೋರ್ಟ್, ಸಿ ರಿಪೋರ್ಟ್ ಆಗಬೇಕಾ ಎಂದು ಧಮ್ಕಿ ಹಾಕಿ ಹಣ ವಸೂಲಿ ಮಾಡುತ್ತಿದ್ದ.

ಸಚಿವ ಜಾರ್ಜ್,ಎಂ.ಬಿ.ಪಾಟೀಲ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೂ ಬ್ಲ್ಯಾಕ್ ಮೇಲ್ ಮಾಡಿ ಮಹಾರಾಷ್ಟ್ರದ ಬ್ಯಾಂಕ್ ಅಕೌಂಟ್ ಗೆ ಹಣ ಹಾಕಿಸಿಕೊಂಡಿದ್ದ ಎನ್ನಲಾಗಿದ್ದು, ಕೊನೆಯ ಬಾರಿ ಸಚಿವ ಜಾರ್ಜ್​ಗೆ ಕರೆ ಮಾಡಿದ್ದ ಈತ ಎಸಿಬಿ ಡಿವೈಎಸ್​ಪಿ ಬಾಲರಾಜ್ ಹೆಸರಿನಲ್ಲಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಈ ಸಂಬಂಧ ಎಸಿಪಿ ಬಾಲರಾಜ್ ಆರ್​ಟಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಕೇಸು ಸಿಸಿಬಿಗೆ ವರ್ಗಾವಣೆಯಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮಹಾರಾಷ್ಟ್ರದಲ್ಲಿ ಆರೋಪಿ ಮುರುಗಪ್ಪನನ್ನ ಬಂಧಿಸಿದ್ದಾರೆ.

Leave a Reply

Your email address will not be published.