ವಿದ್ಯುತ್ ಕಂಬ ಬಿದ್ದು ಗುಡಿಸಲು ನೆಲಸಮ:ವಸ್ತುಗಳು ನಾಶ ಮಕ್ಕಳಿಗೆ ಗಾಯ

ಸುರಪುರ: ನಗರದಲ್ಲಿ ಸುರಿದ ಮಳೆ ಗಾಳಿಗೆ ವಿದ್ಯುತ್ ಕಂಬ ಉರುಳಿ ಬಿದ್ದು ಮನೆಯಲ್ಲಿನ ವಸ್ತುಗಳು ನಾಸವಾಗಿ ಮನೆಯಲ್ಲಿದ್ದ ನಾಲ್ಕು ಮಕ್ಕಳಿಗೆ ಗಾಯಗಳಾದ ಘಟನೆ ಜರುಗಿದೆ.

ನಗರದ ತಿಮ್ಮಾಪುರದ ವಡ್ಡರ ಓಣಿಯಲ್ಲಿನ ಲಕ್ಷ್ಮೀ ವಡ್ಡರ (40 ವರ್ಷ) ಎಂಬುವವರ ಗುಡಿಸಲಿನ ಮೇಲೆ ಉರುಳಿ ಬಿದ್ದ ಕಂಬವು,ಮನೆಯಲ್ಲಿ ಕೇವಲ ಮಕ್ಕಳನ್ನ ಹೊರತುಪಡಿಸಿ ಬೇರೆ ಯಾರು ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ಮನೆಯಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಂಜು ಎಂಬ ಹೆಣ್ಣು ಮಗುವಿನ ಕೈಗೆ ಬಲವಾದ ಪೆಟ್ಟುಬಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಸ್ಥಳಕ್ಕೆ ಜೆಸ್ಕಾಂ ಇಲಾಖೆಯ ಸಿಬ್ಬಂದಿ ಆಗಮಿಸಿ ಕಂಬ ತೆರವು ಕಾರ್ಯ ಆರಂಭಿಸಿದ್ದಾರೆ.

ನಾವು ಬಡವರಾಗಿದ್ದು ನಮ್ಮಿಂದ ಪುನಃ ಗುಡಿಸಲು ನಿರ್ಮಿಸಿಕೊಳ್ಳಲು ಮತ್ತು ಅಡಿಗೆ ವಸ್ತು ಹಾಗು ಸಾಮಾನುಗಳು ಕಂಡುಕೊಳ್ಳಲು ಕಷ್ಟವಿದೆ,ಸರ್ಕಾರ ನಮಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published.