ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರಿಂದ ಮನನೊಂದು ವಿದ್ಯಾರ್ಥಿನಿ ಸಾವು

ಚಿಕ್ಕೋಡಿ : ದ್ವಿತೀಯ ಪಿಯುಸಿ 2ನೇ ವರ್ಷ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರಿಂದ ಮನನೊಂದ ವಿದ್ಯಾರ್ಥಿ ಸಾವಾಗಿರುವ ಘಟನೆ ಮೂಡಲಗಿ ಪಟ್ಟಣದಲ್ಲಿ ನಡೆದಿದೆ.

ಪಿಯುಸಿ ಫಲಿತಾಂಶ ಹೊರಬಿದ್ದ ಹಿನ್ನಲೆಯಲ್ಲಿ ಮೂಡಲಗಿ ಪಟ್ಟಣದ ನಾಗಲಿಂಗ ನಗರದ ನಿವಾಸಿ ಐಶ್ವರ್ಯ ಉಮೇಶ ಬೆಳಕೂಡ (19) ತನ್ನ ಮನೆಯ ರೂಮಿನಲ್ಲಿ ತನ್ನಷ್ಟಕ್ಕೆ ತಾನೇ ಓಡ್ನಿಯನ್ನು ಪ್ಯಾನಿಗೆ ಕಟ್ಟಿ ನೇಣಿಗೆ ಶರಣಾಗಿದ್ದಾಳೆ. ಐಶ್ವರ್ಯ ಧಾರವಾಡ ಎಸ್.ಡಿ.ಎಂ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಓದುತಿದ್ದಳು.

ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಹಿನ್ನಲೆಯಲ್ಲಿ ಮನನೊಂದು ವಿದ್ಯಾರ್ಥಿನಿ ಐಶ್ವರ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನೆಯವರ ಅಳಲು ಮುಗಿಲು ಮುಟ್ಟಿದೆ.

ಈ ಕುರಿತು ಮೂಡಲಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.