ರಮೇಶ ಜಾರಕಿಹೊಳಿ ಆಸೆಯನ್ನ ಭಗವಂತ ಈಡೇರಿಸಲಿ ಅಂದೋರು ಯಾರು ಗೊತ್ತಾ…?!

ಬೆಂಗಳೂರು: ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಆಸೆಯನ್ನು ಭಗವಂತ ಈಡೇರಿಸಲಿ ಎಂದು ತಾವು ಪ್ರಾರ್ಥಿಸುವುದಾಗಿ ಸಚಿವ ಡಿ.ಕೆ. ಶಿವಕುಮಾರ ಹೇಳಿದ್ದಾರೆ.

ರಮೇಶ ಜಾರಕಿಹೊಳಿ ಅವರಿಗೆ ಶಾಸಕ ಸ್ಥಾನ, ಮಂತ್ರಿ ಸ್ಥಾನ ಎಲ್ಲವನ್ನೂ ಪಕ್ಷ ನೀಡಿತ್ತು. ಅವರಿಗೆ ಏನು ಅಸಮಾಧಾನವಾಗಿದೆಯೋ ಯಾರಿಗೆ ಗೊತ್ತು? ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುವುದಾಗಿ ಅವರು ಬೆಂಗಳೂರಿನಲ್ಲಿ ಹೇಳಿದರು.

ರಮೇಶ ತಮಗೆ ಭೆಟಿ ಆಗಿಲ್ಲ. ಭೇಟಿಯಾದರೆ ತಾನೆ ಮನವೊಲಿಸುವುದು ಎಂದೂ ಅವರು ಹೇಳಿರುವುದು ಕುತೂಹಲ ಮೂಡಿಸಿದೆ.

ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಅವರೊಂದಿಗೆ 20 ಶಾಸಕರಿರುವುದಾಗಿ ಅವರು ಹೇಳುತ್ತಿದ್ದಾರೆ. 20 ಅಲ್ಲ, ಎಲ್ಲ ಶಾಸಕರೂ ಅವರ ಜತೆಗೆಯೇ ಕುಳಿತುಕೊಳ್ಳುತ್ತೇವೆ. ರಾಜಕಾರಣವೇ ಬೇರೆ, ಸಂಸಾರವೇ ಬೇರೆ ಎಂದು ಡಿಕಿಶಿ ಟಾಂಗ್ ನೀಡಿದರು.

ಶಾಸಕ ಗಣೇಶ ಮತ್ತು ಆನಂದಸಿಂಗ್ ಇಬ್ಬರೂ ಬಹಳಷ್ಟು ನೊಂದಿದ್ದಾರೆ. ಅವರಿಬ್ಬರ ಮಧ್ಯೆ ಬಾಂಧವ್ಯ ಗಟ್ಟಿಯಾದರೆ ಅಷ್ಟೇ ಸಾಕು ಎಂದೂ ಸಚಿವರು ಹೇಳಿದರು.



Leave a Reply

Your email address will not be published.