ಕಾವೇರಿ ವಿಷಯವಾಗಿ ಕಣ್ಣೀರು ಹಾಕಿದ್ದು ದೇವೆಗೌಡ್ರ ಫ್ಯಾಮಿಲಿ..ಕಾಂಗ್ರೆಸ್, ಬಿಜೆಪಿಗರಲ್ಲ ಮಾಜಿ ಪ್ರದಾನಿ ದೇವೇಗೌಡ ಗುಡುಗು

  • ಮೋದಿಗಿಂತ ನಾನು ಚೆನ್ನಾಗಿ ಮಾತಾಡಬಲ್ಲೆ
  • ಮೈತ್ರಿ ಕೂಟ 20ಸ್ಥಾನ ಪಡೆಯುತ್ತೆ -ಗೌಡ್ರು

ಕೊಪ್ಪಳ: ಕಾವೇರಿ ಸಮಸ್ಯೆಗಾಗಿ ಕಣ್ಣೀರು ಹಾಕಿದ್ದು ದೇವೇಗೌಡ್ರ ಕುಟುಂಬಸ್ಥರು ಹೊರತು ಕಾಂಗ್ರೆಸ್, ಬಿಜೆಪಿಯವರಾಗಲಿ ಕಣ್ಣೀರು ಹಾಕಿಲ್ಲ. ರಾಜ್ಯದ ಸಮಸ್ಯೆಯೂ ಬಂದಾಗ ದೇವೆಗೌಡರು ಫ್ಯಾಮಿಲಿ ಕಣ್ಣಿರು ಹಾಕಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೆಗೌಡ ಹೇಳಿದರು.

ಶುಕ್ರವಾರದಂದು ಕೊಪ್ಪಳ ತಾಲೂಕಿನ ಬಸಾಪೂರ ಬಳಿ ಎಂಎಸ್‌ಪಿಎಲ್ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು 17 ಜನ ಎಮ್.ಪಿ.ಗಳು, ನಾಲ್ಕು ಜನ ಕಾಂಗ್ರೆಸ್ ಮಿನಿಸ್ಟರ್ , ರಾಜ್ಯ ಹಾಗೂ ಕೇಂದ್ರ ಸೇರಿ ಎರಡೂ ಸರ್ಕಾರಗಳಲ್ಲಿ ಅಷ್ಟು ಮಂತ್ರಿಗಳಿದ್ರು. ಅವರು ಯಾರೂ ರೈತರ ಪರ ಹೋರಾಟ ಮಾಡಲಿಲ್ಲ ಎಂದು ನೋವು ಪರೋಕ್ಷವಾಗಿ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ದೇವೇಗೌಡ ಕುಟುಂಬ ಭಾವನಾತ್ಮಕವಾಗಿ ಕಣ್ಣೀರು ಹಾಕತ್ತೆ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ದೇವಗೌಡ್ರು, ಮೋದಿ ಗಿಂತ ನಾನು ಚೆನ್ನಾಗಿ ಮಾತಾಡಬಲ್ಲೆ ಆದ್ರೆ ನನಗೆ ಹಿಂದಿ ಬರೋದಿಲ್ಲ, ಮಾತಾಡಬೇಕಾದ್ರೆ ಮೋದಿ ಮಾತಿನ ಮೇಲೆ ಹಿಡಿತ ಇರಬೇಕು, 20 % ಸರ್ಕಾರ ಎಂಬ ಪ್ರಶ್ನೆಗೆ ಪ್ರತಿಕ್ರಿಯೆಗೆ 17 ರಾಜ್ಯದಲ್ಲಿ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಅವರು ಅಲ್ಲಿ ಪರ್ಸಂಟೇಜ್ ಆಡಳಿತ ನಡೆಸುತ್ತರಾ ಇದನ್ನು ನಾನು ಪಾರ್ಲಿಮೆಂಟ್ ನಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಮೋದಿ ವಿರುದ್ಧ ಗುಡಿಗಿದರು.

ರಾಜ್ಯದಲ್ಲಿ ಮೈತ್ರಿ ಕೂಟ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ನಾನು ಬಾಕಿ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದೇವೆ. ಈಗಾಗಲೇ ಮತದಾರನ ತೀರ್ಪು ಪೆಟ್ಟಿಗೆಯಲ್ಲಿ ಸೀಲ್ ಆಗಿದೆ. ಇಷ್ಟು ಸ್ಥಾನ ಗೆಲ್ತೀವಿ ಅಂತಾ ಹೇಳಾಕಗಲ್ಲ. ಅಭ್ಯರ್ಥಿಯಾಗಿ ನಾವೇ ಗೆಲ್ತೀವಿ ಅಂತಾ ಹೇಳತೀವಿ ಆದ್ರೆ ಮತದಾರರ ತೀರ್ಪನ್ನು ನಾವು ಒಪ್ಪಬೇಕು ಹಾಗೂ ಗೌರವಿಸಬೇಕು – ಹೆಚ್.ಡಿ.ದೇವೆಗೌಡ, ಜೆಡಿಎಸ್ ವರಿಷ್ಠ.

ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಮಾಜಿ ಪ್ರಧಾನಿಗಳು ಕೊಪ್ಪಳ ಸಮೀಪದ ಖಾಸಗಿ ವಿಮಾನ ನಿಲ್ದಾಣದಲ್ಲಿ ಸ್ವಲ್ಪಹೊತ್ತು ವಿರಾಮಿಸಿ, ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಬಳಿಕ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ, ವಿಕ್ಷಕ ಸಿ.ಎಂ.ನಾಗರಾಜ, ಮುಖಂಡರಾದ ವೀರನಗೌಡ ಪಾಟೀಲ, ಕೆ.ಎಂ.ಸೈಯದ್, ಮೌನೇಶ್ ವಡ್ಡಟ್ಟಿ, ಶಿವು ಮಹಾಂತಯ್ಯನಮಠ, ಅಂದಾನಗೌಡ ಪಾಟೀಲ, ಬಸವರಾಜ ಕುಡಕುಂಟಿ, ಸಿ.ಎಂ.ಹಿರೇಮಠ, ವೆಂಕಟೇಶ ಬೆಲ್ಲದ, ಐಯೂಬ್ ಅಡ್ಡೆವಾಲೆ ಸೇರಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.