ಸಂವಿಧಾನ ಮೌಲ್ಯವನ್ನು ಏತ್ತಿ ಹಿಡಿಯುವ ಅಗತ್ಯವಿದೆ: ಹೊನ್ನಪ್ಪ ಮರೆಮ್ಮನವರ


ಹಾವೇರಿ: ದೇಶದಲ್ಲಿ ಇಂದು ಪ್ರಜಾಪ್ರಭುತ್ವದ ಡೋಲಾಯಮಾನ ಸ್ಥಿತಿಯಲ್ಲಿದೆ. ಇಂತಹ ವಿಷಮ ಸಮಯ ದಿನಗಳಲ್ಲಿ ದೇಶದ ಪ್ರಜ್ಞಾವಂತರು ಒಗ್ಗೂಡಿ, ಸಂವಿಧಾನದ ಮೌಲ್ಯವನ್ನು ಏತ್ತಿ ಹಿಡಿಯಬೇಕಾದ ಅನಿವಾರ್ಯತೆಯಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಹೇಳಿದರು.

ಭಾರತ ರತ್ನ, ಸಂವಿಧಾದ ದಿವ್ಯ ಚೇತನ ಅಂಬೇಡ್ಕರ ಅವರ 128 ನೇ ಜನ್ಮ ದಿನಾಚರಣೆಯಂದು, ನಗರದ ಅಂಬೇಡ್ಕರ್ ಪುಸ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಇಂದು ಬಾಬಾ ಸಾಹೇಬ್‍ರ ಸಂವಿಧಾನಕ್ಕೆ ಅಪಾಯದ ದಿನಗಳು ಎದುರಾಗುತ್ತಿವೆ. ಸಂವಿಧಾನವನ್ನು ಪ್ರಶ್ನೆ ಮಾಡುವಂತ, ದೇಶದ ಕಾನೂನಿಗೆ ಅಗೌರವ ತರುವಂತ ಘಟನೆಗಳು ಹೆಚ್ಚುತ್ತಿವೆ. ದೇಶದ ಆಡಳಿತದ ಉನ್ನತ ಹುದ್ದೆಯಲ್ಲಿರುವ ಅಂಬೇಡ್ಕರ್ ಸಿದ್ಧಾಂತದ ವಿರೋಧಿಗಳು, ಸಂವಿಧಾನದ ಬಗ್ಗೆ ಪ್ರಶ್ನೆ ಮಾಡುವಂತೆ ಪ್ರಚೋಧನೆ ಮಾಡುತ್ತಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಮಾಡಲು ದೇಶದ ವಿದ್ಯಾರ್ಥಿ ಹಾಗೂ ಯುವಜನರು ಮಾತ್ರ ಸಾಧ್ಯ ಎಂದು ತಿಳಿಸಿದರು.

ಅದಕ್ಕಾಗಿ ಇಂದು ವಿದ್ಯಾರ್ಥಿಗಳು ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಬದುಕು ಮತ್ತು ಬರಹಗಳ ಬಗ್ಗೆ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಅಂಬೇಡ್ಕರ್ ಅವರನ್ನು ಓದಿಕೊಂಡಾಗ ಮಾತ್ರ ನಮ್ಮ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಅಂಬೇಡ್ಕರ್ ಅವರ ತತ್ವಾದರ್ಶಗಳು ನಮಗೆಂದಿಗೂ ಮಾರ್ಗದರ್ಶಿಯಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಂಬೆಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.

ಈ ಸಮಯದಲ್ಲಿ ಜಿಲ್ಲಾ ಬಿಸಿಯೂಟ ತಯಾರಕರ ಅಧ್ಯಕ್ಷ ಜಿ.ಡಿ.ಪೂಜಾರ,

Leave a Reply

Your email address will not be published.