ಮಾಯಾವತಿ, ಯೋಗಿ ಪ್ರಚಾರ ಮಾಡಬಾರದೆಂದು ಆಯೋಗ ಆದೇಶ ಹೊರಡಿಸಿದ್ದು ಯಾಕೆ…?

ಹೊಸದಿಲ್ಲಿ: ಚುನಾವಣಾ ಪ್ರಚಾರ ಭಾಷಣದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಮಾಜಿ ಸಿಎಂ, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಚುನಾವಣಾ ಆಯೋಗ ಅಂತೂ ಶಿಕ್ಷೆ ವಿಧಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮುಂದಿನ 72 ಗಂಟೆ (ಮೂರು ದಿನ) ಹಾಗೂ ಮಾಯಾವತಿ ಅವರು 48 ಗಂಟೆಗಳ (ಎರಡು) ಕಾಲ ಚುನಾವಣಾ ಪ್ರಚಾರದಿಂದ ದೂರ ಇರಬೇಕು ಎಂದು ಆಯೋಗ ಸೂಚಿಸಿದೆ.

ಈ ಆದೇಶ ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಅನ್ವಯವಾಗುತ್ತದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

Leave a Reply

Your email address will not be published.