ನಕಲಿ ಮತದಾನವೇ ನನ್ನ ಸೋಲಿಗೆ ಕಾರಣ, ಈ ಬಾರಿ ಎಚ್ಚರದಿಂದಿರಿ -ಮಾಜಿ ಶಾಸಕ ಆರ್.ವಿ.ನಾಯಕ

ಸುರಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲು ನಕಲಿ ಮತದಾನದಿಂದಾಗಿದೆ,ಈಬಾರಿಯ ಲೋಕಸಭಾ ಚುಣಾವಣೆಯಲ್ಲಿ ಅಂತ ನಕಲಿ ಮತದಾನ ನಡೆಯದಂತೆ ಕಾರ್ಯಕರ್ತರು ಎಚ್ಚರಿಕೆ ವಹಿಸುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಅವರ ಪರವಾಗಿ ಸುರಪುರ ಮತ ಕ್ಷೇತ್ರದ ದೇವತ್ಕಲ್ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕವಡಿಮಟ್ಟಿ, ಶೇಳ್ಳಗಿ, ಮುಷ್ಠಹಳ್ಳಿ, ದೇವಾಪೂರ, ಅರಳಹಳ್ಳಿ, ಶಾಂತಪೂರ ಗ್ರಾಮಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ, ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದಿನಬಳಕೆಯ ವಸ್ತುಗಳ ಬೆಲೆ ಪೇಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿ ಜನಸಾಮಾನ್ಯರ ಬದುಕಿಗೆ ಪೆಟ್ಟು ನೀಡಿ ಬಂಡವಾಳ ಶಾಹಿಗೆ ಅನೂಕುಲ ಕಲ್ಪಿಸಿದ್ದು, ನೋಟ್ ಅಮಾನ್ಯಕರಣದಿಂದ ಜನರಿಗೆ ತೊಂದರೆಯಾಗಿದ್ದು, ಹಾಗೂ ಕೇಂದ್ರ ಸರಕಾರದ ಸಾಧನೆ ಶೂನ್ಯವಾಗಿದ್ದು ಇವುಗಳ ಕುರಿತು ಮತದಾರರಿಗೆ ತಿಳಿಸಿ ಮತದಾರರಿಗೆ ಮೈತ್ರಿ ಅಭ್ಯರ್ಥಿ ಪರವಾಗಿ ಪತಚಲಾವಣೆ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಮುಖಂಡರಾದ,ಯಾದಗಿರಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ, ಸೂಲಪ್ಪ ಕಮತಿಗಿ, ತಾಲ್ಲುಕು ಪಂಚಾಯತಿ ಸದಸ್ಯ ನಂದಣ್ಣಗೌಡ, ರಾಜಾ ವೆಂಕಟಪ್ಪ ನಾಯಕ(ಅಪ್ಪಯ್ಯ), ಬಸನಗೌಡ ಪಾಟೀಲ್, ಸಣ್ಣ ಮಾನಯ್ಯ ಸಾಹುಕಾರ, , ಗಂಗಾಧರ ನಾಯಕ, ಮಲ್ಲಿಕಾರ್ಜುನ ಸಾಹುಕಾರ, ರಾಮು ನಾಯಕ, ತಿಪ್ಪಣ್ಣ ಪುರ್ಲಿ, ಸಲೀಮ, ಬಸವರಾಜ ಬಾಕ್ಲಿ, ಚನ್ನಪ್ಪಗೌಡ ದೇವಾಪೂರ, ಮಾರ್ಥಂಡಪ್ಪ ಪೂಜಾರಿ, ಮಲ್ಲಣ್ಣ ಕಲಿಕೇರಿ, ಮಾನಯ್ಯ ಭೀಮರಾಯ ಶಿಕಾರಿ, ರಂಗಪ್ಪ ಎಣ್ಣಿ, ರಾಮಕೃಷ್ಣ ಕುಲಕರ್ಣಿ, ರಾಮಣ್ಣ ದೊರೆ, ಹಣಮಂತ ಕೆಸಿಪಿ, ಬಸವರಾಜ ಗೌಡಗೇರಿ, ಬಸವರಾಜ ದೊಡ್ಡಮನಿ, ನಿಂಗಣ್ಣ ಚನ್ನೂರ, ಬಂದೇನವಾಜ ಕಲಿಕೇರಿ, ಮಾನಪ್ಪ, ತಿಪ್ಪಣ್ಣ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published.