ಅಷ್ಟಕ್ಕೂ ಆ ಬ್ರಾಹ್ಮಣರು ಪರಸ್ಪರ ಕಚ್ಚಾಡಿದ್ದೇಕೆ…?

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಗೆ ಸೇರಿದ ಬ್ರಾಹ್ಮಣರು ಪರಸ್ಪರ ಕಿತ್ತಾಡಿಕೊಂಡ ಕುತೂಹಲಕಾರಿ ಪ್ರಸಂಗ ಸೋಮವಾರ ನಡೆಯಿತು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಗೆ ಬಿಜೆಪಿ ಟಿಕೆಟ್ ತಪ್ಪಿದ್ದರ ಕುರಿತಂತೆ ಚರ್ಚಿಸಲು ದಕ್ಷಿಣ ವಿಪ್ರ ಸಮಾಜವು ಬನಗಿರಿಯ ವರಸಿದ್ದಿ ವಿನಾಯಕ ಮಂದಿರದಲ್ಲಿ ಬ್ರಾಹ್ಮಣರ ಸಭೆ ಆಯೋಜಿಸಿತ್ತು. ಈ ಸಭೆ ಆರಂಭವಾಗುವ ಮುನ್ನವೇ ಬ್ರಾಹ್ಮಣರು ಪರಸ್ಪರ ಕಿತ್ತಾಡುವ ಮೂಲಕ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.

ಸಭೆ ಆರಂಭವಾಗುವುದಕ್ಕೂ ಮುನ್ನವೇ ಕೆಲವರು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಘೋಷಣೆ ಕೂಗಲು ಆರಂಭಿಸಿದ್ದೇ ಗದ್ದಲಕ್ಕೆ ಕಾರಣವಾಯಿತು.

ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ ಬ್ರಾಹ್ಮಣರ ಆಶೀರ್ವಾದ ಪಡೆಯಲು ಬರಲಿದ್ದಾರೆ ಎಂಬ ಸುದ್ದಿಯೂ ಅಲ್ಲಿ ಗದ್ದಲ ಹೆಚ್ಚಲು ಕಾರಣವಾಯಿತು. ಇನ್ನೊಂದೆಡೆ ಕೆಲವು ಬ್ರಾಹ್ಮಣರು ” ಮೋದಿ ಮೋದಿ ಮೋದಿ ‘ ಎಂದೂ ಘೋಷಣೆ ಕೂಗುತ್ತಿದ್ದರು.

Leave a Reply

Your email address will not be published.