ಬಡವರ ನಾಡಿ ಮಿಡಿತ ತಿಳಿದಿರುವುದು ಕಾಂಗ್ರೆಸ್‍ಗೆ ಮಾತ್ರ: ಮಾಜಿ ಶಾಸಕ ಆರ್ ವಿಎನ್

ಸುರಪುರ: ಮೋದಿ ನೇತೃತ್ವದ ಕೇಂದ್ರ ಸರಕಾರ ಐದು ವರ್ಷದಲ್ಲಿ ಬಡವರ ಹಾಗೂ ರೈತರ ಪರವಾಗಿ ಯಾವ ಯೋಜನೆಯನ್ನು ಜಾರಿಗೆ ತಂದಿಲ್ಲ, ದೇಶದ ಆರ್ಥಿಕ ಪರಿಸ್ಥಿಯು ಹದಗೆಟ್ಟು ಹೋಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೂರಿದರು.

ತಾಲೂಕಿನ ತಳವಾರಗೇರಾ, ವಾಗಣಗೇರಾ, ಪೇಠ ಅಮ್ಮಾಪೂರ, ಮಾವಿನಮಟ್ಟಿ, ಕನ್ನೇಳ್ಳಿ ಗ್ರಾಮಗಳಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಪರ ಮತ ಯಾಚನೆ ನಡೆಸಿ ಮಾತನಾಡಿದ ಅವರು, ಬಡವರ ನಾಡಿ ಮಿಡಿತವು ಕಾಂಗ್ರೆಸ್‍ಗೆ ತಿಳಿದಿದೆ. ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಬಿ.ವಿ.ನಾಯಕ ಅವರಿಗೆ ಹೆಚ್ಚು ಮತ ನೀಡುವ ಮೂಲಕ ಕಾಂಗ್ರೆಸ್ ಬಲಪಡಿಸೋಣ, ಕೋಮುವಾದಿ ಬಿಜೆಪಿಯನ್ನು ದೂರವಿಡೋಣ ಎಂದು ಹೇಳಿದರು.


ಜಿ.ಪಂ ಅಧ್ಯಕ್ಷರು ರಾಜಶೇಖರಗೌಡ, ಸೂಲಪ್ಪ ಕಮತಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಿಂಗರಾಜ ಬಾಚಿಮಟ್ಟಿ, ವಿಠ್ಹಲ್ ಯಾದವ, ವೆಂಕೊಬ ಯಾದವ, ಪ್ರಕಾಶ ಗುತ್ತೇದ್ದಾರ, ಪಾಶಾ ಅಮ್ಮಾಪೂರ, ಪ್ರಕಾಶ ಯಾದವ, ರಾಮಚಂದ್ರ ದೊರಿ ತಳವರಗೇರಾ, ಶರಬಯ್ಯ ಸ್ವಾಮಿ ತಳವರಗೇರಾ, ನಾಗಪ್ಪ ಯಾದವ ತಳವರಗೇರಾ, ಬೈಲಪ್ಪಗೌಡ ತಾ.ಪಂ ಸದಸ್ಯರು ವಾಗಣಗೇರಾ, ದೇಸಾಯಿಗೌಡ ವಾಗಣಗೇರಾ, ರಾಘವೇಂದ್ರ ವಾಗಣಗೇರಾ, ನಿಂಗಪ್ಪ ಕುಳಗೇರಿ, ನಾನೆಗೌಡ ವಾಗಣಗೇರಾ, ನಾದಭ್ರಹ್ಮ ಕನ್ನೇಳ್ಳಿ, ಬಸವರಾಜ ಕನ್ನೇಳ್ಳಿ, ಮಲ್ಕಪ್ಪ ದೊರಿ ಕನ್ನೇಳ್ಳಿ, ಚಂದಪ್ಪ ಸೇರಿದಂತೆ ಇತರರಿದ್ದರು.

Leave a Reply

Your email address will not be published.