ಕಳ್ಳನ ಬಂಧನ: ಟ್ರ್ಯಾಕ್ಟರ್, ಬೈಕ್ ಜಪ್ತಿ

ಕಳ್ಳನ ಬಂಧನ: ಟ್ರ್ಯಾಕ್ಟರ್, ಬೈಕ್ ಜಪ್ತಿ

ಇಂಡಿ: ಟ್ರ್ಯಾಕ್ಟರ್, ಬೈಕ್ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಇಂಡಿ ಪೊಲೀಸರು ಬಂಧಿಸಿದ್ದಾರೆ.

ಲೋಣಿ ಕೆಡಿ ಗ್ರಾಮದ ಮಹಾದೇವ ಪಾಂಡ್ರೆ(36) ಬಂಧಿತ. ಇಂಡಿ ರೈಲ್ವೆ ನಿಲ್ದಾಣ ಬಳಿ ಪೊಲೀಸರನ್ನು ಕಂಡು ಓಡಿ ಹೋರಟಿದ್ದ ವೇಳೆ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಈತ ಕದ್ದಿದ್ದ ಟ್ಯಾಕ್ಟರ್, ಬೈಕ್ ಹಾಗೂ ಪಂಪ್ ಸೆಟ್ ಮೋಟರ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಇಂಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.