ಮತ ಹಾಕಿ ಹೊರಬಂದ ಮಹಿಳೆ ಕುಸಿದು ಬಿದ್ದು ಸಾವು!

ಇಂಡಿ: ಮತದಾನ ಮಾಡಿ ಮತಗಟ್ಟೆಯಿಂದ ಹೊರಬಂದ ಮಹಿಳೆಯೊಬ್ಬರು ಕುಸಿದು ಬಿದ್ದು, ಸಾವನ್ನಪ್ಪಿದ ಘಟನೆ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ನಡೆದಿದೆ.

ಮಹಾದೇವಿ ಸಿಂದಖೇಡ(55) ಮೃತ ಮಹಿಳೆ. ಅಹಿರಸಂಗ ಗ್ರಾಮದ ಮತಗಟ್ಟೆ 32 ರಲ್ಲಿ ಮತ ಹಾಕಿ ಹೊರಬಂದು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.