ಸಿಎಂ ಆಪ್ತರ ಮನೆ ಮೇಲೆ ಐಟಿ ದಾಳಿ

ಮದ್ದೂರು: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಹಾಗೂ ಜಿಡಿಎಸ್ ನಾಯಕಿ ನಾಗರತ್ನಾ ಸ್ವಾಮಿ ಅವರ ಮದ್ದೂರಿನ ನಿವಾಸದ ಮೇಲೆ ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಸದಸ್ಯ ತಿಮ್ಮೇಸ್ವಾಮಿ ಅವರ ಮನೆ ಹಾಗೂ ಅವರಿಗೆ ಸೇರಿದ ಸೋಮೇಶ್ವರ ಫರ್ಟಿಲೈಸರ್ಸ್ ಹಾಗೂ ಸಾ ಮಿಲ್ ಮೇಲೂ ಐಟಿ ದಾಳಿ ನಡೆದಿದೆ.

ನಾಗರತ್ನ ಹಾಗೂ ತಿಮ್ಮೇಸ್ವಾಮಿ ಇಬ್ಬರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತರು ಎಂದು ಹೇಳಲಾಗಿದೆ.


 (ANI)

Leave a Reply

Your email address will not be published.