ಕಾಟಾಚಾರಕ್ಕೆ ಕುಸ್ತಿ ನಡೆಸಿ ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾದ ಸ್ವೀಪ್ ಸಮಿತಿ

ಜಮಖಂಡಿ: ಮತದಾನ ಜಾಗೃತಿಗಾಗಿ ಸ್ವೀಪ್ ಸಮಿತಿ ಪಟ್ಟಣದಲ್ಲಿ ಕಾಟಾಚಾರಕ್ಕೆ ನಡೆಸಿ ಕುಸ್ತಿ ನಡೆಸಿ ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಪಿಬಿ ಹೈಸ್ಕೂಲು ಮೈದಾನದಲ್ಲಿ ಕಾಟಾಚಾರಕ್ಕೆ ಎರಡು ತಂಡಗಳ ಕುಸ್ತಿ ಆಡಿಸಿ ತಾಲೂಕು ಸವೀಪ್ ಸಮಿತಿ ಕೈತೊಳೆದುಕೊಂಡಿದೆ. ಬೇರೆ ಜಿಲ್ಲೆಯಿಂದ ಬಂದ ಕ್ರೀಡಾಪಟುಗಳಿಗೂ ಊಟದ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ್ಯವಹಿಸಿದೆ. ಇದರಿಂದ ರೊಚ್ಚಿಗೆದ್ದ ಕ್ರೀಡಾಪಟುಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಬೇರೆ ಜಿಲ್ಲೆಯಿಂದ ಭಾಗವಹಿಸಿದ ಕ್ರೀಡಾ ಪಟುಗಳಿಗೆ ಸಾರಿಗೆ ವೆಚ್ಚ ಹಾಗೂ ಭಾಗವಹಿಸಿದ ಪಟುಗಳಿಗೆ ಪ್ರೋತ್ಸಾಹ ಧನ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಮೊಟಕು ಗೊಳಿಸಲಾಗಿದೆ ಎಂದು ಪಟುಗಳ ದೂರು.

Leave a Reply

Your email address will not be published.