ಜಗಳ ಬಿಡಿಸಲು ಬಂದ ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ ಕುಡುಕರು

ಕಿತ್ತೂರು: ಜಗಳ ಬಿಡಿಸಲು ಬಂದ ಪೇದೆ ಮೇಲೆಯೇ ಹಲ್ಲೆಗೆ ಯತ್ನಿಸಿದ ಕುಡುಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

ಕಿತ್ತೂರು ಪೊಲೀಸ್ ಠಾಣೆ ಸಮೀಪದ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಇಬ್ಬರು ಯುವರು ಜಗಳವಾಡುತ್ತಿದ್ದರು. ಇದನ್ನು ನೋಡಿ ಜಗಳ ಬಿಡಲು ಪೇದೆ ಎಚ್.ಎಲ್. ನಾಯ್ಕರ್ ಮುಂದಾಗಿದ್ದಾರೆ. ಈ ವೇಳೆ ಕುಡುಕರಿಬ್ಬರು ಪೇದೆ ನಾಯ್ಕರ್ ಅವರಿಗೆ ಅವಾಜ್ ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ. ಇಬ್ಬರನ್ನು ಸ್ಥಳೀಯರು ಥಳಿಸಿ ಠಾಣೆಗೆ ಕರೆದೊಯ್ದಿದ್ದಾರೆ.


Leave a Reply

Your email address will not be published.