ಅಮೆರಿಕ, ಭೂತಾನ್‍ನಿಂದ ಬಂದು ಹಕ್ಕು ಚಲಾಯಿಸಿದ ಮತದಾರರು


  • ಟೆಕ್ಕಿ ಅಭಿಷೇಕ್, ಎಕನಾಮಿಕ್ಸ್ ಪ್ರಾಧ್ಯಾಪಕಿ ಅನುಪಮಾ ರಿಂದ ಮತದಾನ

ಕೊಪ್ಪಳ :ಮತದಾನ ಮಾಡುವ ಸಲುವಾಗಿಯೇ ಕೊಪ್ಪಳ ಕ್ಷೇತ್ರ ವ್ಯಾಪ್ತಿಯ ಇಬ್ಬರು ಮತದಾರರು ವಿದೇಶದಿಂದ ಆಗಮಿಸಿ ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿ ಗ್ರಾಮಸ್ಥರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿಯನ್ನು ಸಹ ಮೂಡಿಸಿದರು.

ಅಮೆರಿಕಾದಿಂದ ಬಂದು ವೋಟು :ಕಾರಟಗಿ ತಾಲೂಕಿನ ಯರಡೋಣ ಗ್ರಾಮಕ್ಕೆ ಅಮೆರಿಕದಿಂದ ಬಂದ ಅಭಿಷೇಕ್ ಪಾಟೀಲ್ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಅಭಿಷೇಕ್ ಪಾಟೀ¯ ಅಮೆರಿಕದಲ್ಲಿ ಕಳೆದ 7 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಸಾಫ್ಟವೇರ್ ಎಂಜಿನಿಯರ್ ಆಗಿರುವ ಅವರು ಇದೇ ಮೊದಲ ಬಾರಿ ಮತ ಹಾಕಲು ಮತಗಟ್ಟೆ ಸಂಖ್ಯೆ 138ರಲ್ಲಿ ಮತದಾನ ಮಾಡಿ ಮತದಾನದ ಮಹತ್ವ ಸಾರಿದರು.

ಮತದಾನ ಎಲ್ಲರ ಹಕ್ಕು, ಪ್ರತೊಯೊಬ್ಬರೂ ಬಂದು ಮತದಾನ ಮಾಡಬೇಕು, ನನ್ನ ಕರ್ತವ್ಯ ನಾನು ನಿರ್ವಹಿಸಿದ್ದೇನೆ, ಎಲ್ಲರು ನಿಮ್ಮ ಕರ್ತವ್ಯ ನಿರ್ವಹಿಸಿ ಎಂದು ಎನ್‍ಆರ್‍ಐ ಅಭಿಷೇಕ್ ಪಾಟೀಲ್ ಜನರಲ್ಲಿ ಮನವಿ ಮಾಡಿದರು. ಇದೇ ಮೊದಲ ಬಾರಿಗೆ ಮತದಾನಕ್ಕೊಸ್ಕರ ತಾಯ್ನಾಡಿಗೆ ಬಂದಿದ್ದರು. ಗ್ರಾಮದ ಯುವಕನ ಉತ್ಸಾಹ ಕಂಡು ಅನೇಕರು ಭೇಷ್ ಎಂದು ತಾವು ಸಹ ಮತದಾನ ಮಾಡಿದರು.

ಭೂತಾನ್‍ನಿಂದ ಬಂದ ಪ್ರಾಧ್ಯಾಪಕಿ ಅನುಪಮಾ ಅವರಿಂದ ಚಿಕ್ಕಮ್ಯಾಗೇರಿಯಲ್ಲಿ ಮತದಾನ :ಮತದಾನ ಮಹತ್ವ ತಿಳಿಸಲು ಭೂತಾನ್ ದೇಶದಿಂದ ಆಗಮಿಸಿದ ಅನುಪಮಾ ಮಸಾಲಿ ಮಂಗಳವಾರ ಬೆಳಗ್ಗೆ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 1ರಲ್ಲಿ ಮತದಾನ ಮಾಡಿದರು.

ಮೂಲತಃ ಯಲಬುರ್ಗಾ ತಾಲೂಕು ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿಯಾದ ಅನುಪಮಾ, ಸಧ್ಯ ಭೂತಾನ್ ದೇಶದ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮದಲ್ಲೇ ಇದ್ದು ಮತದಾನ ಮಾಡದೆ ದೂರ ಉಳಿಯುವವರಿಗೆ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿರುವ ಅನುಪಮಾ ದೇವೇಂದ್ರಕುಮಾರ್ ಮಸಾಲಿ, ಮತದಾನ ಮಾಡುವ ಮೂಲಕ ಗ್ರಾಮಸ್ಥರಲ್ಲಿ ಮತದಾನದ ಮಹತ್ವ ತಿಳಿಸಿದರು.

1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಇಲ್ಲಿವರೆಗೂ ಸತತ ಎಲ್ಲಾ ಚುನಾವಣೆಯಲ್ಲೂ ಮತದಾನ ಮಾಡುವ ಮೂಲಕ ವಯೋವೃದ್ಧೆ ಎಲ್ಲರ ಗಮನ ಸೆಳೆದರು. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರಾಜೂರ ಗ್ರಾಮದ ಯಲ್ಲವ್ವ ಶಿವಪ್ಪ ಎಂಬ ಅಜ್ಜಿ ತಮ್ಮ 89ನೇ ವಯಸ್ಸಿನಲ್ಲಿ ರಾಜೂರ ಗ್ರಾಮದ ಮತಗಟ್ಟೆ ಸಂಖ್ಯೆ 138ರಲ್ಲಿ ಮತದಾನ ಮಾಡಿದರು.

ಮೂರು ತಲೆಮಾರುಗಳಿಂದ ಮತದಾನ.. 1952ರ ಪ್ರಥಮ ಲೋಕಸಭಾ ಚುನಾವಣೆಯಿಂದ 2019ರ 16ನೇ ಚುನಾವಣಾಯಲ್ಲಿ ಮತದಾನ ಮಾಡಿದ ಅಜ್ಜ, ಮಗ ಹಾಗೂ ಹೊಸ ಮತದಾರನಾಗಿ ಮೊಮ್ಮಗ ಇವರು ಒಟ್ಟಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದು ಇನ್ನೊಂದು ವಿಶೇಷ. ಕೊಪ್ಪಳದ ಸಿಂಪಿಲಿಂಗಣ್ಣ ರಸ್ತೆಯ ನಿವಾಸಿಗಳಾದ ಹನುಮೇಶರಾವ ಕರಣಂ, ಮೋಹನರಾವ ಕರಣಂ, ಮನೋಜ ಕರಣಂ ಇವರು 21ನೇ ವಾರ್ಡ್‍ನಲ್ಲಿನ ಮತಗಟ್ಟೆಯಲ್ಲಿ ಒಟ್ಟಿಗೆ ಮತದಾನ ಮಾಡಿವ ಮೂಲಕ ಮಾದರಿಯಾದರು.

Leave a Reply

Your email address will not be published.