ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ “ಲಕ್ಷ್ಮೀ “ಯಾತ್ರೆ….

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್ ಸಾಧುನವರ ಅವರ ಪರವಾಗಿ ಮತಯಾಚಿಸಿದರು,ವಿವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದ ಅವರು ಸಂಸದ ಸುರೇಶ ಅಂಗಡಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಸವದತ್ತಿ ತಾಲ್ಲೂಕಿನ ಹೂಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ ನಡೆಸಿದ ಪಾದ ಯಾತ್ರೆ ಎಲ್ಲರ ಗಮನ ಸೆಳೆಯಿತು.ಸುಡು ಬಿಸಿಲಲ್ಲೂ ಮನೆ ಮನೆಗೆ ತೆರಳಿ ಮತಯಾಚಿಸಿದ ಹೆಬ್ಬಾಳಕರ ಬೆಳಗಾವಿ ಲೋಕಸಭಾ ಕ್ಷೇತ್ರದ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮತದಾರರರಲ್ಲಿ ಹೆಬ್ಬಾಳಕರ ಮನವಿ ಮಾಡಿಕೊಂಡರು

ಸಂಸದ ಸುರೇಶ ಅಂಗಡಿಗೆ ಕ್ಷೇತ್ರದ ಜನ ಮೂರು ಬಾರಿ ಸೇವೆ ಮಾಡುವ ಅವಕಾಶ ನೀಡಿದ್ದೀರಾ ಹದನೈದು ವರ್ಷದಲ್ಲಿ ನಿಮ್ಮೂರಿಗೆ ಇವರು ಎಷ್ಟು ಸಲ ಬಂದಿದ್ದಾರೆ ? ಯಾರ ಸುಖ ದು:ಖಗಳನ್ನು ಆಲಿಸಿದ್ದಾರೆ ? ಸಂಸದ ಸುರೇಶ ಅಂಗಡಿ ನಿಮ್ಮೂರಿಗೆ ಮಾಡಿದ್ದೇನು ? ಇವೆಲ್ಲ ಪ್ರಶ್ನೆಗಳಿಗೆ ನೀವೇ ಉತ್ತರ ಹುಡುಕಿ ಸುರೇಶ ಅಂಗಡಿ ಆಡಳಿತ ಪಕ್ಷದಲ್ಲಿದ್ದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲಿಲ್ಲ ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಸ್ವಂತ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಿಕೊಂಡ ಅಂಗಡಿ ಜನ ಸಾಮಾನ್ಯರಿಗೆ ಏನೂ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್ ಸಾಧುನವರ ಮಾತನಾಡಿ, ಸಂಸದ ಸುರೇಶ ಅಂಗಡಿ ಅವರಿಗೆ ಮತಯಾಚಿಸಲು ಯಾವುದೇ ಬಂಡವಾಳವೇ ಇಲ್ಲ ಹದಿನೈದು ವರ್ಷದಲ್ಲಿ ಕ್ಷೇತ್ರದ ಜನ ಅಂಗಡಿ ಅವರ ಕಾರ್ಯವೈಖರಿ ನೋಡಿ ಸುಸ್ತಾಗಿದ್ದಾರೆ ಕ್ಷೇತ್ರದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಈ ಚುನಾವಣೆಯಲ್ಲಿಯೂ ಬಿಜೆಪಿಯ ಸುಳ್ಳು ಭಾಷಣಕ್ಕೆ ಮತದಾರರು ಮರಳಾಗುವದಿಲ್ಲ ಎಂದು ಸಾಧುನವರ ಹೇಳಿದರು.

ಈ ಸಂಧರ್ಭದಲ್ಲಿ ಸವದತ್ತಿ ತಾಲ್ಲೂಕಿನ ಎಲ್ಲ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published.