ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ: ಲಕ್ಷ್ಮಿ ಹೆಬ್ಬಾಳಕರ್ ಆರೋಪ

ಬೆಳಗಾವಿ: ಶಾಸಕರಿಗೆ 20 ರಿಂದ 50 ಕೋಟಿ ಹಣದ ಆಮಿಷವೊಡ್ಡಿ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲಗಾ ಗ್ರಾಮದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಸಾಧುನವರ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಇಷ್ಟೊಂದು ತೊಂದರೆ ನೀಡುತ್ತಿದ್ದರು ಕೂಡ ನಾನು ಕ್ಷೇತ್ರದಲ್ಲಿ 800 ಕೋಟಿ ರೂ. ಅಭಿವೃದ್ದಿ ಕಾಮಗಾರಿಗಳನ್ನು ಮಾಡಿದ್ದೇನೆ ಎಂದು ಹೇಳಿದರು.

ಸಂಸದ ಸುರೇಶ ಅಂಗಡಿ ವಿರುದ್ದ ವಾಗ್ದಾಳಿ ನಡೆಸಿದ ಶಾಸಕಿ, . ಸಂಸದ ಸುರೇಶ ಅಂಗಡಿ ಕಲ್ಲಿದ್ದಂತೆ ಅವರಿಗೆ ಜನ ಪರಿಸ್ಥಿತಿ ಅರ್ಥವಾಗುವುದಿಲ್ಲ. ಮೂರು ಬಾರಿ ಗಾಳಿಯಲ್ಲಿ ತೇಲಿ ಬಂದಿದ್ದಾರೆ ಸಾಧುನವರ್ ಸಾಧು ಪ್ರಾಣಿಯಂತೆ ಅವರನ್ನು ಆರಿಸಿ ತರುವಂತೆ ಜನರಲ್ಲಿ ಮನವಿ ಮಾಡಿದರು.

ಪ್ರಧಾನಿ ಮೋದಿ ಸೂಟು ಬೂಟು ಧರಿಸಿ ವಿದೇಶ ಸುತ್ತುವುದರಲ್ಲಿಯೇ ಕಾಲ ಕಳೆದರು. ಸೈನಿಕರನ್ನು ರಾಜಕೀಯಕ್ಕೆ ಬಳಸಿಕೊಂಡರು. ಪ್ರಜಾತಂತ್ರ ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರೆ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದರೆ 70 ವರ್ಷ ಇತಿಹಾಸದಲ್ಲಿಯೇ ಇದೆ ಮೊದಲು. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯನ್ನು ಕಿತ್ತೊಗೆಯುಂತೆ ಕರೆ ನೀಡಿದರು.

ಬೆಳಗಾವಿ ಗ್ರಾಮಿಣ ಕ್ಷೆತ್ರದ ರೈತರ ಜಮೀನಿಗೆ ಕೈ ಹಾಕಿ ರಿಂಗ್ ರೋಡ ಯೋಜನೆ ತಂದಿದ್ದಾರೆ. ರೈತರ ಜಮೀನಿನ ಮೇಲೆ ಕಣ್ಣು ಹಾಕಿರುವ ಅವರು ತಮ್ಮ ಸ್ವಂತದ ಜಮೀನು ರಕ್ಷಣೆ ಮಾಡಿಕೊಂಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ ಆರೋಪಿಸಿದರು

ಮಾಜಿ ಶಾಸಕ ಫಿರೋಜ್ ಸೇಠ ಮಾತನಾಡಿ, ಬಿಜೆಪಿ ಐದು ವರ್ಷದಲ್ಲಿ ದೇಶದ ಜನರಿಗೆ ಏನೂ ಮಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಜಾತಿ ಜಾತಿಗಳ ನಡುವೆ ವೈಷಮ್ಯದ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ. ಎಸ್ .ಸಾಧುನವರ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಹಲವಾರು ಕೊಡುಗೆಗಳನ್ನು ಕೊಟ್ಟಿದೆ ಕಾಂಗ್ರೆಸ್ ಪಕ್ಷ 70 ವರ್ಷದಲ್ಲಿ ಭವ್ಯ ಭಾರತ ನಿರ್ಮಾಣ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಸಾಧುನವರ ಮನವಿ ಮಾಡಿದರು.

ಎಐಸಿಸಿ ಕಾರ್ಯದರ್ಶಿ ಯಶೋಮತಿ ಠಾಖೂರ , ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿನಯ ನಾವಲಗಟ್ಟಿ,ರಾಜು ಸೇಠ,ಯುವರಾಜ ಕದಂ ಶಂಕರಗೌಡ ಪಾಟೀಲ ಸಿಸಿ ಪಾಟೀಲ ಸೇರಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published.