ನಾಳಿನ ಲೋಕಸಮರದಲ್ಲಿ ಇಬ್ಬರು ಪ್ರಬಲ ಪಕ್ಷೇತರ ಅಭ್ಯರ್ಥಿಗಳು: 52 ವರ್ಷಗಳ ಬಳಿಕ ಸೃಷ್ಠಿಯಾಗುತ್ತಾ ಇತಿಹಾಸ?

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಮರಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿ ಇದ್ದು ರಣರಂಗದಲ್ಲಿ ಇಬ್ಬರು ಪ್ರಬಲ ಪಕ್ಷೇತರ ಅಭ್ಯರ್ಥಿಗಳು ಇದ್ದಾರೆ.

ಬೆಂಗಳೂರು ಕೇಂದ್ರದಿಂದ ಪ್ರಕಾಶ್ ರಾಜ್ ಮತ್ತು ಹೈವೋಲ್ಟೆಜ್ ಮಂಡ್ಯ ಕ್ಷೇತ್ರದಿಂದ ದಿ. ಅಂಬರೀಶ ಪತ್ನಿ ಸುಮಲತಾ ಕೂಡ ಲೋಕಸಮರದಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳು ಇತಿಹಾಸ ಸೃಷ್ಠಿಸಲು ಹೊರಟಿದ್ದು 52 ವರ್ಷಗಳ ಬಳಿಕ ಮತದಾರ ಪ್ರಭು ಕೃಪೆ ಮಾಡಿದರೆ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗುವ ಸಾಧ್ಯತೆಗಳು ಇವೆ.

Leave a Reply

Your email address will not be published.