ಪ್ರತ್ಯೇಕ ಲಿಂಗಾಯತ ಧರ್ಮ: ಡಿಕೆಶಿ ವಿರುದ್ಧ ಎಂ ಬಿ ಪಾಟೀಲ ಗರಂ ಆಗಿದ್ದೇಕೆ…?!

ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ತಮ್ಮ ಹೇಳಿಕೆಗೆ ಬದ್ಧವಿರುವುದಾಗಿ ಹೇಳಿರುವ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಎಂ.ಬಿ. ಪಾಟೀಲ ಕಿಡಿಕಾರಿದ್ದಾರೆ.

ಡಿಕೆಶಿ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಈಗಾಗಲೇ ಪಕ್ಷವನ್ನು ನಿರ್ನಾಮ ಮಾಡಿರುವ ಅವರು ಈ ಭಾಗದಲ್ಲಿಯೂ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ ಎನಿಸುತ್ತಿದೆ ಎಂದು ಪಾಟೀಲ ಕಟುವಾಗಿ ಟೀಕಿಸಿದ್ದಾರೆ.

ಒಕ್ಕಲಿಗರ ಪ್ರಾಬಲ್ಯವಿರುವಲ್ಲೆಲ್ಲ ಕಾಂಗ್ರೆಸ್ ಪಕ್ಷ ನೆಲ ಕಚ್ಚಿದೆ. ಕೆಲವರ ದರ್ಪ, ವ್ಯಕ್ತಿತ್ವದಿಂದ ಹೀಗಾಗುತ್ತವೆ. ಚುನಾವಣೆ ಹೊಸ್ತಿಲಲ್ಲಿರುವುದರಿಂದ ಇದೆಲ್ಲ ಬೇಡ ಎಂದು ಸುಮ್ಮನಾಗಿದ್ದೇನೆ ಎಂದು ಹೇಳುವ ಮೂಲಕ ಚುನಾವಣೆ ಬಳಿಕ ಏನೆಲ್ಲ ಆಗಬಹುದು ಎಂಬ ವಿಚಾರ ಚರ್ಚೆಗೆ ಗ್ರಾಸವಾಗುವಂತೆ ಮಾಡಿದ್ದಾರೆ.

Leave a Reply

Your email address will not be published.