ಮಧುಗಿರಿ ವಕೀಲ ಸಂಘ ಅಧ್ಯಕ್ಷರಾಗಿ ಕೃಷ್ಣರೆಡ್ಡಿ ಆಯ್ಕೆ

ಮಧುಗಿರಿ : ತಾಲ್ಲೂಕು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಪಿ ಸಿ ಕೃಷ್ಣರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ತುಮಕೂರು ರಸ್ತೆಯ ಸಮೀಪವಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 130 ಮತದಾರಿದ್ದು, 123 ಮತಗಳು ಚಲಾವಣೆಯಾಗಿವೆ.

ಉಪಾಧ್ಯಕ್ಷರಾಗಿ ವಿ.ಮಹೇಶ್ (34) ಕಾರ್ಯದರ್ಶಿ ಎಂ.ವಿ.ದಯಾನಂದ್ ಸಾಗರ್ (61) ಖಜಾಂಚಿಯಾಗಿ ರಂಗನಾಥ್.ಜಿ.(85) ಮತಗಳನ್ನು ಪಡೆದುಕೊಂಡಿದ್ದಾರೆ.

ಜಂಟಿ ಕಾರ್ಯದರ್ಶಿಯಾಗಿ ಮಂಜನಾಥ್, ನಿರ್ದೇಶಕರಾಗಿ ತಿಮ್ಮರಾಜು ಹೆಚ್.ಟಿ, ಸ್ವರ್ಣಾಂಬಿಕ, ದೀಪಾ, ಹೆಚ್.ಹನುಮಂತರಾಯಪ್ಪ, ನಂಜುಂಡಯ್ಯ, ಡಿ.ಎನ್.ಶಂಕರಪ್ಪ, ಬಿ.ಎಂ.ರಂಗನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾಗಿ ಜಿ.ಗೋಪಾಲಕೃಷ್ಣ, ಎಂ.ಎನ್.ಬಾಬುರಾಜ್ ಕಾರ್ಯನಿರ್ವಹಿಸಿದರು.

ಇದೇ ಸಂಧರ್ಭದಲ್ಲಿ ವಕೀಲರಾದ ಮಂಜುನಾಥ್, ಗಾಳಿಹಳ್ಳಿ ಮಲ್ಲಿಕಾರ್ಜುನ್, ನಾಗಭೂಷಣ್, ಜಿ.ಎನ್.ನರಸಿಂಹಮೂರ್ತಿ, ರಾಮಾಂಜಿನಪ್ಪ, ಕೇಶವರೆಡ್ಡಿ, ಶ್ರೀರಂಗರಾಜು, ದೇವರಾಜು, ಗಿರೀಶ್, ಗುತ್ತಿಗೆದಾರ ವೆಂಕಟರಂಗಾರೆಡ್ಡಿ ಮತ್ತಿತರರು ಇದ್ದರು.

Leave a Reply

Your email address will not be published.