ಅಡ್ರೆಸ್ ಇಲ್ದಂಗೆ ಯಾರಾಗ್ತಾರೆ ಅನ್ನೋದು ಚುನಾವಣೆ ಬಳಿಕ ಗೊತ್ತಾಗತ್ತೆ: ಬಿಎಸ್ ವೈ ಗೆ ಖರ್ಗೆ ಟಾಂಗ್

ಕಲಬುರಗಿ: ಚುನಾವಣೆ ಬಳಿಕ ಕಾಂಗ್ರೆಸ್ ಅಡ್ರೆಸ್ ಇರಲ್ಲ ಬಿಎಸ್ ವೈ ಹೇಳಿಕೆಗೆ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ನಗರದ ಡಿಎಆರ್ ಮೈದಾನದಲ್ಲಿ ಮಾತನಾಡಿದ ಅವರು, ಯಾರು ಅಡ್ರೆಸ್ ಇಲ್ದಂಗೆ ಆಗ್ತಾರೆ ಅನ್ನೋದನ್ನ ಚುನಾವಣೆ ನಂತ್ರ ಗೊತ್ತಾಗತ್ತೆ. ಮತದಾರರು ನಮ್ಮ ಅಡ್ರೆಸ್ ಬರೀತಾರೋ, ಅವರ ಅಡ್ರೆಸ್ ಬರಿತಾರೋ ಕೆಲವು ದಿನಗಳಲ್ಲಿ ಗೊತ್ತಾಗುತ್ತೆ ಎಂದರು.

ದುರಂಹಕಾರ ಮಾತಿನಿಂದ ಕೆಲವರು ಗೌರವ ಕಳೆದುಕೊಂಡಿದ್ದಾರೆ. ಮೊದಲಿನಿಂದಲೂ ನನಗೆ ದೇವರ ಮೇಲೆ ನಂಬಿಕೆ ಇದೆ. ಟೆಂಪಲ್ ರನ್ ಮಾಡೊದು ನನಗೇನೂ ಹೊಸದಲ್ಲ ಅಂತಾ ಉಮೇಶ್​ ಜಾಧವ್‌ಗೆ ಟಾಂಗ್ ನೀಡಿದ್ರು.

Leave a Reply

Your email address will not be published.