ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ


ಮೂಡಲಗಿ : ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಸುಣಧೋಳಿ ಗ್ರಾಮದ ಅಂಬೇಡ್ಕರ ಭವನದಲ್ಲಿ ಸೋಮವಾರ ಸಂಜೆ ಜರುಗಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ 128ನೇ ಜಯಂತಿ ನಿಮಿತ್ಯ ಹಮ್ಮಿಕೊಂಡಿದ್ದ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ ಅವರನ್ನು ಒಂದೇ ಸಮುದಾಯಕ್ಕೆ ಸೀಮಿತ ಮಾಡಬೇಡಿ. ಅವರು ಎಲ್ಲ ವರ್ಗಗಳಿಗೆ ಸ್ವಾತಂತ್ರ್ಯ ನೀಡಿದ ಮಹಾನುಭಾವ. ಅಂಬೇಡ್ಕರ ಅವರು ಈ ಭೂಮಿಯಲ್ಲಿ ಜನ್ಮ ತಾಳಿರುವುದೇ ನಮ್ಮೆಲ್ಲರ ಭಾಗ್ಯ. ವಿಶ್ವದಲ್ಲಿಯೇ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚಿಸಿರುವ ಡಾ.ಅಂಬೇಡ್ಕರ ಅವರನ್ನು ಎಲ್ಲ ಸಮಾಜದವರು ಗೌರವಿಸಬೇಕು ಎಂದರು.

ಜಗತ್ತಿನಲ್ಲಿಯೇ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇದಕ್ಕೆ ಶ್ರೇಷ್ಠ ಸಂವಿಧಾನ ರಚಿಸಿರುವ ಅಂಬೇಡ್ಕರ ಅವರ ಪಾತ್ರ ಹಿರಿದಾಗಿದೆ. ಅಂಬೇಡ್ಕರ ಅವರು ಮೀಸಲಾತಿ ನೀಡದಿದ್ದರೆ ನಾವೆಲ್ಲ ಇಂದು ಅಧಿಕಾರ ಅನುಭವಿಸುತ್ತಿರಲಿಲ್ಲ. ಅಂಬೇಡ್ಕರ ಒಬ್ಬ ಶ್ರೇಷ್ಠ ವಿಶ್ವ ಮಾನವರಾಗಿದ್ದರೆಂದು ಅವರು ಹೇಳಿದರು. ದಲಿತ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅಂಬೇಡ್ಕರ ಅವರ ತತ್ವಾದರ್ಶಗಳನ್ನು ಪಾಲಿಸಬೇಕು. ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಅಂಬೇಡ್ಕರ ಬಗ್ಗೆ ಬಾಹುಸಾಹೇಬ ಕಾಂಬಳೆ ಹಾಗೂ ಸುರೇಶ ಐಹೊಳೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ದಲಿತ ಬಾಂಧವರು ಸತ್ಕರಿಸಿದರು.

ಗುರುರಾಜ ಪಾಟೀಲ, ರವಿ ಪರುಶೆಟ್ಟಿ, ಶಿವು ವಾಲಿ, ಕಲ್ಲಪ್ಪ ಕಮತಿ, ಭೀಮಶಿ ಕಮತಿ, ಸಿದ್ಧಾರೂಢ ಕಮತಿ, ಭೀಮನಗೌಡ ಪಾಟೀಲ, ರಾಮಪ್ಪ ಬೆಣ್ಣಿ, ಬಸು ಗೌಡರ, ಬಸಪ್ಪ ಮಾದರ, ಸಹದೇವ ಕಮತಿ, ಉದ್ದಪ್ಪ ಮಾದರ, ಮಹಾದೇವ ಹಾರೂಗೇರಿ, ಪರಶುರಾಮ ಮಾದರ, ಸುರೇಶ ಕಂಕಣವಾಡಿ, ಪರಸಪ್ಪ ಭಜಂತ್ರಿ, ಶ್ರೀಕಾಂತ ದೇವರಮನಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಈಗಾಗಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಕುಡಿಯುವ ನೀರಿನ ಸಂಬಂಧ ನೀರನ್ನು ಹರಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ನೀರು ಅಮೂಲ್ಯವಾದದ್ದು. ನೀರನ್ನು ಮಿತವಾಗಿ ಬಳಸಿ. ಮುಂದೊಂದು ದಿನ ಬಂಗಾರಕ್ಕಿಂತ ನೀರಿನ ಹೆಚ್ಚಿನ ಬೆಲೆ ಬರುತ್ತದೆ- ಮಾಜಿ ಸಚಿವ, ಶಾಸಕ ಬಾಲಚಂದ್ರ ಜಾರಕಿಹೊಳಿ

Leave a Reply

Your email address will not be published.